September 14, 2026
Monday, September 14, 2026
spot_img

ರೇಸ್ ಗೆಲ್ಲೋಕೆ ಹೋದ್ರು, ಫ್ಯಾನ್ಸ್ ಎದುರು ಟ್ರೋಲ್ ಆದ್ರು! ಅಜಿತ್‌ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡಿನ ಫೇಮಸ್ ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ಶನಿವಾರ ನಡೆದ ‘ಲೀ ಮಾನ್ಸ್’ ಕಾರ್ ರೇಸಿಂಗ್ ಅಖಾಡದಲ್ಲಿ ತಮಿಳಿನ ಸೂಪರ್‌ಸ್ಟಾರ್, ರೇಸರ್ ಅಜಿತ್ ಕುಮಾರ್ ಅವರು ಭಾಗವಹಿಸಿದ್ದರು. ಕಾರ್‌ಗಳ ಸೌಂಡ್, ಅಭಿಮಾನಿಗಳ ಆರ್ಭಟದ ನಡುವೆ ಈ ಈವೆಂಟ್ ಸಖತ್ ಜೋರಾಗಿಯೇ ಇತ್ತು. ಆದರೆ, ರೇಸ್‌ಗಿಂತ ಹೆಚ್ಚಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವುದು ಅಜಿತ್ ಕುಮಾರ್ ಅವರ ರೇಸಿಂಗ್ ಪವರ್ ಅಲ್ಲ, ಬದಲಿಗೆ ಒಬ್ಬ ಫ್ಯಾನ್ ಮೇಲೆ ಅವರು ತೋರಿಸಿದ ಕೋಪ.

ರೇಸಿಂಗ್ ಟ್ರ್ಯಾಕ್ ಹತ್ತಿರ ಅಭಿಮಾನಿಯೊಬ್ಬ ಫುಲ್ ಖುಷಿಯಿಂದ ಅಜಿತ್ ಅವರೊಂದಿಗೆ ಒಂದು ಸೆಲ್ಫಿ ತಗೋಬೇಕು ಎಂದು ಮೊಬೈಲ್ ಹಿಡಿದು ಓಡೋಡಿ ಬಂದಿದ್ದಾನೆ. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಅಜಿತ್ ಕುಮಾರ್ ತಮ್ಮ ಎರಡೂ ಕೈಗಳನ್ನು ನಡುವಿನ ಮೇಲಿಟ್ಟುಕೊಂಡು, ಆ ಫ್ಯಾನ್‌ಗೆ ತೀಕ್ಷ್ಣವಾಗಿ ಮುಖ ಗಂಭೀರವಾಗಿಟ್ಟುಕೊಂಡು ದಿಟ್ಟಿಸಿ ನೋಡಿದ್ದಾರೆ. ಅಷ್ಟರಲ್ಲಿ ಅಜಿತ್ ಅವರ ಬಾಡಿಗಾರ್ಡ್ ಆ ಅಭಿಮಾನಿಯನ್ನು ತಳ್ಳಿ ದೂರ ಕಳಿಸಿದ್ದಾರೆ. ಅಭಿಮಾನಿ ದೂರ ಹೋದರೂ ಅಜಿತ್ ಮಾತ್ರ ಅದೇ ಸಿಟ್ಟಿನ ಲುಕ್‌ನಲ್ಲಿ ಆತನನ್ನೇ ನೋಡುತ್ತಾ ಮುಂದೆ ಸಾಗಿದ್ದಾರೆ.

https://www.instagram.com/reel/DdOC–5tjwg/?utm_source=ig_web_button_share_sheet

ಈ ಇಡೀ ಘಟನೆಯ ವೀಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ಅಜಿತ್ ವಿರುದ್ಧ ಫುಲ್ ಗರಂ ಆಗಿದ್ದಾರೆ.

ಈ ವೀಡಿಯೋ ನೋಡಿದ ಅಭಿಮಾನಿಗಳು ಮತ್ತು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ನಿಮಗೆ ಈ ರೇಂಜ್ ಅಭಿಮಾನಿಗಳು ಇಲ್ಲ ಅಂದಿದ್ರೆ ನೀವು ಏನೂ ಅಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಏಕೆ ಸ್ವಾಮಿ ಅಷ್ಟೊಂದು ಅಟಿಟ್ಯೂಡ್ ತೋರಿಸ್ತೀರಾ? ನಿಮ್ಮನ್ನು ಜನ ಮೆಚ್ಚಿ ಈ ಮಟ್ಟಕ್ಕೆ ತಂದಿದ್ದಾರೆ. ಒಂದು ಸಣ್ಣ ನಗು ನಕ್ಕರೆ ನಿಮ್ಮ ಖಜಾನೆಯಿಂದ ದುಡ್ಡು ಖಾಲಿಯಾಗುತ್ತಾ?” ಎಂದು ತರಾಟೆಗೆ ತಗೆದುಕೊಂಡಿದ್ದಾರೆ.

ಒಂದೆಡೆ ಅಜಿತ್ ಸಿಟ್ಟಿನ ವೀಡಿಯೋ ವೈರಲ್ ಆಗುತ್ತಿದ್ದರೆ, ಇನ್ನೊಂದೆಡೆ ಈ ರೇಸಿಂಗ್ ಈವೆಂಟ್‌ನಲ್ಲಿ ತಮಿಳು ಸಿನಿಮಾದ ಇಬ್ಬರು ದೈತ್ಯ ನಾಯಕರಾದ ‘ದಳಪತಿ’ ವಿಜಯ್ ಮತ್ತು ‘ತಲಾ’ ಅಜಿತ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಹಬ್ಬದ ವಾತಾವರಣ ನಿರ್ಮಿಸಿದರು.

ಒಟ್ಟಿನಲ್ಲಿ, ಸಿಲ್ವರ್‌ಸ್ಟೋನ್ ರೇಸ್‌ ಗ್ರೌಂಡ್‌ನಲ್ಲಿ ವಿಜಯ್-ಅಜಿತ್ ಮಿಲನ ಅಭಿಮಾನಿಗಳಿಗೆ ಖುಷಿ ಕೊಟ್ಟರೆ, ಅಜಿತ್ ಅವರ ಆ ಸಣ್ಣ ಸಿಟ್ಟಿನ ಲುಕ್ ಮಾತ್ರ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !