October 8, 2026
Thursday, October 8, 2026
spot_img

ಏಳು ದಶಕಗಳ ದಾಂಪತ್ಯ ಅಂತ್ಯ! ತಾಳಿ ಕಟ್ಟಿ, ಕುಂಕುಮವಿಟ್ಟು ಕಣ್ಣೀರಿನ ವಿದಾಯ ಹೇಳಿದ ದೇವೇಗೌಡರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇವೇಗೌಡರು ಹಾಗೂ ಚೆನ್ನಮ್ಮ ಅವರ ಏಳು ದಶಕಗಳ ದಾಂಪತ್ಯ ಅಂತ್ಯಗೊಂಡಿದ್ದು, ಪ್ರೀತಿಯ ಮಡದಿಗೆ ಕಡೆಯ ಬಾರಿ ಹಣೆಗೆ ಕುಂಕುಮವಿಟ್ಟು ಕಣ್ಣೀರಿನ ವಿದಾಯ ಹೇಳಲಾಗಿದೆ.

ಸಣ್ಣ ಕಾರಣಗಳಿಗೆ ಡಿವೋರ್ಸ್‌ ನೀಡುವ ಈ ಯುಗದಲ್ಲಿ ಏಳು ದಶಕಗಳ ಕಾಲ ಒಟ್ಟಿಗೇ ಜೀವನ ನಡೆಸುವುದು ಸುಲಭದ ಮಾತಲ್ಲ. ಮುತ್ತೈದೆಯಾಗಿಯೇ ಕೊನೆಯುಸಿರೆಳೆದ ದೊಡ್ಮನೆ ಒಡತಿಗೆ ಭಾವ ಪೂರ್ಣ ವಿದಾಯ ಸಿಕ್ಕಿದೆ.

ಹಾಸನದಲ್ಲಿ ರೇವಣ್ಣ ನಿವಾಸದಲ್ಲಿ ವಿಧಿ ವಿಧಾನಗಳು ನಡೆದಿದ್ದು, ದೇವೇಗೌಡರು ಪತ್ನಿ ಚೆನ್ನಮ್ಮನಿಗೆ ಹೊಸ ಸೀರೆ, ಅರಿಶಿಣ ಕುಂಕುಮವಿಟ್ಟು, ತಾಳಿ ಕಟ್ಟಿ ಪೂಜೆ ಮಾಡಿದ್ದಾರೆ. ಈ ವೇಳೆ ಇಡೀ ಕುಟುಂಬ ಭಾವುಕವಾಗಿ ಕಣ್ಣೀರಿಟ್ಟಿದೆ. ಒಕ್ಕಲಿಗ ಸಂಪ್ರದಾಯದಂತೆ ಪೂಜೆ, ಪುನಸ್ಕಾರಗಳು ನಡೆದಿದ್ದು, ರಾಹುಕಾಲ, ಯಮಗಂಡಕ‌ ಕಾಲ ಇದ್ದಿದ್ರಿಂದ ಸ್ವಲ್ಪ ತಡವಾಗಿದೆ. ಇದೀಗ ತಾಳಿ ಕಟ್ಟಿ, ಪೂಜೆ ಮಾಡುವ ಪ್ರಕ್ರಿಯೆ‌ಪೂರ್ಣಗೊಂಡಿದೆ. ಎರಡು ಹಳ್ಳಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಬಳಿಕ ಅಂತ್ಯ ಕ್ರಿಯೆ ಜಾಗಕ್ಕೆ ತಲುಪಲಿದ್ದಾರೆ.

Must Read