ಏಳು ತಿಂಗಳ ಗರ್ಭಿಣಿ ಅನುಮಾನಸ್ಪದವಾಗಿ ಸಾವು; ಕೆರೆಯಲ್ಲಿ ಶವ ಪತ್ತೆ

ಹೊಸದಿಗಂತ ವರದಿ, ಮೈಸೂರು
ಏಳು ತಿಂಗಳ ಗರ್ಭಿಣಿಯೊಬ್ಬಳು ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಆಕೆಯ ಶವ ನಗರದ ಬಿಳಿಕೆರೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಮೈಸೂರಿನ ವಿಜಯನಗರದ ನಿವಾಸಿ ಅಶ್ವಿನಿ(23) ಮೃತ ದುರ್ದೈವಿ.
ಮೈಸೂರು ತಾಲೂಕಿನ ಮೈದನಹಳ್ಳಿ ನಿವಾಸಿ ಪ್ರಮೋದ್ ಎಂಬಾತನನ್ನು ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2021 ಜೂನ್ 13 ರಂದು ವಿವಾಹವಾಗಿದ್ದಳು. ಏಳು ತಿಂಗಳ ಗರ್ಭಿಣಿಯಾಗಿದ್ದ ಆಕೆ ಕೆಲ ದಿನಗಳ ಹಿಂದೆ ಗಂಡನ ಜೊತೆ ಜಗಳವಾಡಿ ಮುನಿಸಿಕೊಂಡು ತವರು ಮನೆಗೆ ಬಂದಿದ್ದಳು.
ಭಾನುವಾರ ಮಧ್ಯಾಹ್ನ ವಿಜಯನಗರದಲ್ಲಿರುವ ಪತ್ನಿ ಮನೆ ಬಳಿ ಬಂದ ಪ್ರಮೋದ್, ಅಶ್ವಿನಿ ಜೊತೆ ಮಾತನಾಡಬೇಕು ಎಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ರಾತ್ರಿಯಾದರೂ ಮಗಳು ಬಾರದೇ ಇದ್ದಾಗ, ಮಗಳಿಗೆ ತಂದೆ ಹಲವು ಬಾರಿ ಫೋನ್ ಮಾಡಿದ್ದು, ಆದರೆ ಅಶ್ವಿನಿ ರಿಸೀವ್ ಮಾಡಿಲ್ಲ. ನಂತರ ಪ್ರಮೋದ್‌ಗೂ ಕೂಡಾ ಕಾಲ್ ಮಾಡಿದಾಗಲೂ ಆತ ಕೂಡ ರಿಸೀವ್ ಮಾಡಿಲ್ಲ.
ಇಂದು ಬೆಳಗ್ಗೆ ಬಿಳಿಕೆರೆ ಸಮೀಪದ ಕೆರೆಯಲ್ಲಿ ಅಶ್ವಿನಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೋಷಕರು ಮಗಳ ಶವ ನೋಡಿ, ಇದನ್ನು ಆಕೆಯ ಗಂಡನೆ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಪೋಷಕರು ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!