ಶಾಹಿದ್‌ ನಟನೆಯ ʼಜೆರ್ಸಿʼ ಬಿಡುಗಡೆ ದಿನವೇ ಪೈರಸಿ ಸೈಟ್‌ ಗಳಲ್ಲಿ ಲೀಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಖ್ಯಾತ ಬಾಲಿವುಡ್‌ ನಟ ಶಾಹಿದ್ ಕಪೂರ್ ನಟನೆಯ ಜೆರ್ಸಿ ಚಿತ್ರ ಬಿಡಗಡೆಯಾದ ದಿನವೇ (ಏಪ್ರಿಲ್ 22) ಪೈರಸಿ ಸೈಟ್‌ ಗಳಲ್ಲಿ ಸಂಪೂರ್ಣವಾಗಿ ಸೋರಿಕೆಯಾಗಿದೆ!.
ಶಾಹೀದ್‌ ಕಪೂರ್‌ ಹಾಗೂ ಮೃಣಾಲ್‌ ಠಾಕೂರ್‌ ಮುಖ್ಯಪಾತ್ರದಲ್ಲಿರುವ ಚಿತ್ರವು ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಹಿಂದಿಯ ಜೆರ್ಸಿ ಚಿತ್ರವು ತೆಲುಗಿನಲ್ಲಿ ನಾನಿ ನಟಿಸಿದ್ದ ಜೆರ್ಸಿ ಚಿತ್ರದ ರಿಮೇಕ್‌. ಈ ಚಿತ್ರ ತೆಲುಗಿನಲ್ಲಿ ಭರ್ಜರಿ ಹಿಟ್‌ ಎನಿಸಿಕೊಂಡಿತ್ತು. ಈ ಹಿಂದೆ ತೆಲುಗಿನ ಅರ್ಜುನ್‌ ರೆಡ್ಡಿ ಚಿತ್ರವನ್ನು ಬಾಲಿವುಡ್‌ ನಲ್ಲಿ ʼಕಬೀರ್‌ ಸಿಂಗ್‌ʼ ಮಾಡಿದ್ದ ಶಾಹಿದ್‌ ವೃತ್ತಜೀವನದ ದೊಡ್ಡ ಹಿಟ್‌ ಕೊಟ್ಟಿದ್ದರು. ಆದ್ದರಿಂದ ಜೆರ್ಸಿ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆಯೂ ದುಪ್ಪಟ್ಟಾಗಿತ್ತು.
ಆದರೆ ನಿನ್ನೆ ಚಿತ್ರವು ಬಿಡುಗಡೆಯಾದ ದಿನವೇ ತಮಿಳು ರಾಕರ್ಸ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಶಾಕ್‌ ನೀಡಿದೆ.
ಚಿತ್ರವು ಲೀಕ್‌ ಆಗದಂತೆ ತೆಯಲು ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ತೆಗೆದುಕೊಂಡರೂ ಚಿತ್ರ ಸೋರಿಕೆಯಾಗಿರುವುದು ಅಘಾತ ಮೂಡಿಸಿದೆ ಎಂದು ಚಿತ್ರತಂಡ ಹೇಳಿದೆ. ಇತ್ತೀಚೆಗೆ ತೆರಕಂಡ ರಾಧೆ ಶಾಮ್‌, ಮುಂಬೈ ಸಾಗಾ, ರೂಹಿ, ಕೆಜಿಎಫ್ ಚಾಪ್ಟರ್ 2, ಕಾಶ್ಮೀರ ಫೈಲ್ಸ್ ಸೇರಿದಂತೆ ಹಲವು ಚಲನಚಿತ್ರಗಳು ತಮಿಳ್‌ ರಾಕರ್ಸ್‌ ಸೇರಿದಂತೆ ಅಕ್ರಮ ಸೈಟ್ ಗಳಲ್ಲಿ ಸೋರಿಕೆಯಾಗುತ್ತಿವೆ.
ಜೆರ್ಸಿ ಏಪ್ರಿಲ್ 14 ರಂದೇ ತೆರೆಕಾಣುವುದಾಗಿ ನಿರ್ದೇಶಕರು ಘೋಷಿಸಿದ್ದರು. ಆದರೆ ರಾಕಿಂಗ್‌ ಸ್ಟಾರ್‌ ಯಶ್ ಚಿತ್ರ ಕೆಜಿಎಫ್: 2 ಅಬ್ಬರಕ್ಕೆ ಬೆದರಿ ಚಿತ್ರ ಬಿಡುಗಡೆ ಮುಂದೂಡಲಾಗಿತ್ತು. ಅಂತಿಮವಾಗಿ ನಿನ್ನೆ ಬಿಡುಗಡೆಯಾಗಿದೆ.
ಚಿತ್ರದ ಕಥಾವಸ್ತುವು ಪ್ರತಿಭಾವಂತ ವಿಫಲ ಕ್ರಿಕೆಟಿಗನ (ಶಾಹಿದ್) ಸುತ್ತ ಸುತ್ತುತ್ತದೆ. ಆತ ಮೂವತ್ತರ ಹರೆಯದಲ್ಲಿ ಕ್ರಿಕೆಟ್‌ಗೆ ಮರಳಲು ನಿರ್ಧರಿಸುತ್ತಾನೆ. ನಂತರ ಭಾರತ ತಂಡವನ್ನು ಪ್ರತಿನಿಧಿಸುವ ಆಸೆಯನ್ನು ಹೇಗೆ ಈಡೇರಿಸಿಕೊಳ್ಳುತ್ತಾನೆ ಮತ್ತು ಭಾರತದ ಜೆರ್ಸಿ ಹೊಂದುವ ತನ್ನ ಮಗನ ಆಸೆಯನ್ನು ಹೇಗೆ ಪೂರೈಸುತ್ತಾನೆ ಎಂಬುದು ಚಿತ್ರದ ಕಥಾವಸ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!