ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿಗಳನ್ನು ನೋಡೋದಕ್ಕೆ ಫ್ಯಾನ್ಸ್ ಯಾವ ಹಂತಕ್ಕೆ ಹೋಗೋದಕ್ಕೂ ರೆಡಿಯಾಗಿರ‍್ತಾರೆ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮೀಟ್ ಮಾಡೋದಕ್ಕೆ ಇಬ್ಬರು ಫ್ಯಾನ್ಸ್ ಫಿಲ್ಮಿ ಶೈಲಿಯಲ್ಲಿ ಮನ್ನತ್ ಪ್ರವೇಶ ಮಾಡಿದ್ದಾರೆ.
ಮನೆಯೊಳಗೆ ಹೋಗೋಕೆ ಆಲ್‌ರೆಡಿ ಪ್ಲಾನ್ ಮಾಡಿಕೊಂಡು ಬಂದಿದ್ದ ಫ್ಯಾನ್ಸ್‌ನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮನೆ ಹೊರಗೆ ಶಾರುಖ್ ಬರ‍್ತಾರೆ ಎಂದು ಫ್ಯಾನ್ಸ್ ಕಾದು ಕುಳಿತಿದ್ದಾರೆ. ಎಷ್ಟು ಹೊತ್ತಾದರೂ ಶಾರುಖ್ ಹೊರಬರದ ಕಾರಣ, ಗೋಡೆ ಏರಿ ಒಳಗೆ ಬಂದಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣವೇ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾವು ಸರ್ ಫ್ಯಾನ್ಸ್ ನೋಡೋಕೆ ಬಂದಿದ್ವಿ ಅಷ್ಟೆ ಎಂದು ಹೇಳಿಕೊಂಡಿದ್ದಾರೆ.