57ರ ವಯಸಲ್ಲೂ ಸಿಕ್ಸ್ ಪ್ಯಾಕ್‌ನಲ್ಲಿ ಯಂಗ್‌ ಆಗಿ ಕಾಣುತ್ತಿರುವ ಶಾರುಖ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್ ಟೀಸರ್ ಬಿಡುಗಡೆಯಾಗಿದೆ. ಟೆಕ್ನಾಲಜಿ ಮತ್ತು ಅದ್ಭುತ ಸಾಹಸ ದೃಶ್ಯಗಳ ಜೊತೆಗೆ ಶಾರುಖ್ ಖಾನ್ ನೋಟ, ವಿಶೇಷವಾಗಿ ಅವರ ಸಿಕ್ಸ್ ಪ್ಯಾಕ್ ಪ್ರೇಕ್ಷಕರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಟೀಸರ್ ನಲ್ಲಿ ಪೂರ್ತಿಯಾಗಿ ತೋರಿಸದಿದ್ದರೂ ಪರ್ಫೆಕ್ಟ್ ಬಾಡಿ ಮೆಂಟೇನ್ ಮಾಡಿರುವುದು ಗೊತ್ತಾಗಿದೆ. ಕೆಲವು ದಿನಗಳ ಹಿಂದೆ ಪಠಾಣ್ ಚಿತ್ರೀಕರಣದ ಶಾರುಖ್ ಅವರ ಸಿಕ್ಸ್ ಪ್ಯಾಕ್ ದೇಹದ ಫೋಟೋ ಕೂಡ ಲೀಕ್ ಆಗಿತ್ತು.

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಈ ಹಿಂದೆ ಹಲವು ಬಾರಿ ಸಿಕ್ಸ್ ಪ್ಯಾಕ್ ಬಾಡಿ ಮೆಂಟೇನ್‌ ಮಾಡಿದ್ದಾರೆ. ಆದರೆ ಇದೀಗ 57ರ ಹರೆಯದಲ್ಲೂ ಶಾರುಖ್ ಸಿಕ್ಸ್ ಪ್ಯಾಕ್ ಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 4 ವರ್ಷಗಳ ಗ್ಯಾಪ್ ನಂತರವೂ ಶಾರುಖ್ ಸ್ಕ್ರೀನ್ ಪ್ರೆಸೆನ್ಸ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲದಂತೆ ಕಾಣಲು ತಮ್ಮ ಮೈಕಟ್ಟಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಹಾಗಾಗಿಯೇ ಪಠಾಣ್ ಟೀಸರ್ ನಲ್ಲಿ ಶಾರುಖ್ ಕಟೌಟ್ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸಿದ್ದಾರ್ಡ್ ಆನಂದ್ ನಿರ್ದೇಶನದ, ಪಠಾಣ್ 200 ಕೋಟಿ ಬಜೆಟ್‌ನ ಔಟ್-ಅಂಡ್-ಔಟ್ ಆಕ್ಷನ್ ಎಂಟರ್‌ಟೈನರ್ ಆಗಿದೆ. ಈ ಸಿನಿಮಾದಲ್ಲಿ ಸಾಹಸ ದೃಶ್ಯಗಳಿಗಾಗಿ ಶಾರುಖ್ 6 ಪ್ಯಾಕ್ ಮಾಡಿದ್ದಾರೆ. ಈ ಫಿಟ್‌ನೆಸ್‌ಗಾಗಿ ಕೋವಿಡ್ ಸಮಯದಿಂದಲೂ ಸಿಕ್ಸ್ ಪ್ಯಾಕ್‌ಗಾಗಿ ಪ್ರಯತ್ನಿಸುತ್ತಿರುವ ಶಾರುಖ್, ಫಿಟ್‌ನೆಸ್ ಫ್ರೀಕ್ ಮತ್ತು ಬಾಲಿವುಡ್‌ನಲ್ಲಿ ಸಿಕ್ಸ್ ಪ್ಯಾಕ್ ಸ್ಪೆಷಲಿಸ್ಟ್ ಆಗಿರುವ ಸಲ್ಮಾನ್ ಖಾನ್, ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರಿಂದ ಸಲಹೆಗಳನ್ನು ಪಡೆದರು ಎನ್ನಲಾಗಿದೆ. ತಮ್ಮ ಸಿಕ್ಸ್ ಪ್ಯಾಕ್‌ಗಾಗಿ, ಶಾರುಖ್ ಪ್ರತ್ಯೇಕವಾಗಿ ತರಬೇತುದಾರರನ್ನು ನೇಮಿಸಿಕೊಂಡು ಸಾಕಷ್ಟು ವರ್ಕೌಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!