CINE | ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಭಿಮಾನಿಗೆ ಶಾರುಖ್ ವಿಡಿಯೋ ಕಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಶಾರುಖ್ ಖಾನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿಗೆ ಕರೆ ಮಾಡಿ ಸ್ಥೈರ್ಯ ನೀಡಿದ್ದಾರೆ.

ಈ ಕಾರಣಕ್ಕಾಗಿಯೇ ಶಾರುಖ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ಯಾನ್ಸರ್ ರೋಗಿಯಾದ ಅಭಿಮಾನಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಪ್ರಿಯಾ ಚಕ್ರವರ್ತಿ ಎಂಬಾಕೆ ನನ್ನ ತಾಯಿಗೆ ಕ್ಯಾನ್ಸರ್, ಶಾರುಖ್ ಭೇಟಿ ಮಾಡಬೇಕು ಎನ್ನುವುದು ಅವರ ಕೊನೆ ಆಸೆ ಎಂದು ಟ್ವೀಟ್ ಮಾಡಿದ್ದರು.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ಶಾರುಖ್ ಖಾನ್ಈ ಟ್ವೀಟ್ ಖುದ್ದು ಶಾರುಖ್ ಖಾನ್ ನೋಡಿದ್ದು, ಅವರ ಸಂಖ್ಯೆ ಪಡೆದು ವಿಡಿಯೋ ಕರೆ ಮಾಡಿ ಅರ್ಧ ಗಂಟೆ ಮಾತನಾಡಿದ್ದಾರೆ. ಶಾರುಖ್ ಈ ನಡೆಗೆ ಅಭಿಮಾನಿ ಬಳಗ ಸಂತಸ ವ್ಯಕ್ತಪಡಿಸಿದ್ದು, ಕಿಂಗ್ ಖಾನ್ ಬಗ್ಗೆ ಗೌರವ ಹೆಚ್ಚಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!