ಬಾಯಾರಿಕೆ ನೀಗಿಸುವ ಕಲಿಯುಗದ ಭಗೀರಥ ಈ ಶಂಕರಲಾಲ್ ಸೋನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ವ್ಯಕ್ತಿಯ ಹೆಸರು ಶಂಕರಲಾಲ್ ಸೋನಿ, ಎಲ್ಲರೂ ಇವರನ್ನು ‘ಜಬಲ್‌ಪುರದ ವಾಟರ್‌ಮ್ಯಾನ್’ ಅಂತಲೇ ಕರೆಯುತ್ತಾರೆ. ಪ್ರತಿದಿನ ನೂರಾರು ಜನರ ಬಾಯಾರಿಕೆಯನ್ನು ನೀಗಿಸುವ ಕಾಯಕ ಮಾಡುತ್ತಾ ಜನರಿಂದ ಮೆಚ್ಚುಗೆ ಪಡೆದಿದ್ದಾರೆ. ಬೇಸಿಗೆಯಲ್ಲಿ ನೀರಿನ ದಾಹ ತೀರಿಸುವ ಸಲುವಾಗಿ ಇಂತಹದ್ದೊಂದು ಸಮಾಜಮುಖಿ ಕಾರ್ಯಕ್ಕೆ ಕೈ ಹಾಕಿದ್ದಾರೆ ಶಂಕರ್‌ ಲಾಲ್‌ ಸೋನಿ. ಜಬಲ್‌ಪುರದ ಬೀದಿ ಬೀದಿಗಳಲ್ಲಿ ಸೈಕಲ್‌ ತುಳಿಯುತ್ತಾ ಬಾಯಾರಿಕೆ ಎಂದು ಬಂದವರಿಗೆ ಯಾವುದೇ ಅಪೇಕ್ಷೆಯಿಲ್ಲದೆ ನೀರಿನ ದಾಹವನ್ನು ತೀರಿಸುತ್ತಾರೆ.

ಈ ಕಾರ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಂಕರಲಾಲ್ ಸೋನಿ, ʻನಾನು ಈ ಕೆಲಸವನ್ನು ಕಳೆದ 26 ವರ್ಷಗಳಿಂದ ಮಾಡುತ್ತಿದ್ದೇನೆ. ಪ್ರತಿದಿನ 18 ನೀರಿನ ಸಂಗ್ರಹ ಚೀಲಗಳನ್ನು ಒಯ್ಯುತ್ತೇನೆ. ಪ್ರತಿ ಶೇಖರಣಾ ಚೀಲದಲ್ಲಿ ಸುಮಾರು 5 ಲೀಟರ್ ನೀರು ಇರುತ್ತದೆ. ದಿನಕ್ಕೆ ಮೂರು ಬಾರಿ ನೀರಿನ ಬಾಟಲಿಗಳಿಗೆ ಮರುಪೂರಣʼ ಮಾಡುವುದಾಗಿ ಸೋನಿ ತಿಳಿಸಿದ್ದಾರೆ.

ಇಳಿವಯಸ್ಸಿನಲ್ಲೂ ಕೂಡ ಇವರು ಮಾಡುತ್ತಿರುವ ಸಮಾಜ ಮುಖಿ ಕಾರ್ಯಕ್ಕೆ ಜನರಿಂದ ಶಹಬ್ಬಾಸ್‌ ಗಿರಿ ಸಿಕ್ಕಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ಮಾಡುತ್ತಿರುವ ಈ ಕಾರ್ಯ ನನಗೆ ತೃಪ್ತಿ ನೀಡಿದೆ ಅಂತಾರೆ ಶಂಕರಲಾಲ್ ಸೋನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!