ಶತಾಯುಷಿ ಹೀರಾಬೆನ್‌ ಪಂಚಭೂತಗಳಲ್ಲಿ ಲೀನ: ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ಮೋದಿ ಪಂಚಭೂತಗಳಲ್ಲಿ ಲೀನರಾದರು. ತಾಯಿ ಚಿತೆಗೆ ನರೇಂದ್ರ ಮೋದಿ ಅವರ ಅಗ್ನಿಸ್ಪರ್ಶ ನೆರವೇರಿಸಿದರು. ದೇಶಕ್ಕೆ ಪ್ರಧಾನಿ ಸ್ಥಾನದಲ್ಲಿದ್ದರೂ ತಾಯಿಗೆ ಮಗನಾಗಿ ನಿಂತು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು, ಇದೀಗ ಚಿತೆಗೆ ಅಗ್ನಿಸ್ಪರ್ಷ ಮಾಡುವ ಮೂಲಕ ತಾಯಿಗೆ ಅಂತಿಮ ವಿದಾಯ ಹೇಳಿದರು.

ಗಾಂಧಿನಗರದ ಸೆಕ್ಟ ರ್‌ 30ರ ರುದ್ರಭೂಮಿಯಲ್ಲಿ ಹೀರಾಬೆನ್‌ ಅವರ ಅಂತ್ಯಕ್ರಿಯೆ ನೆರವೇರಿದೆ. ಚಿತೆ ಪಕ್ಕದಲ್ಲಿ ಮೌನವಾಗಿ ನಿಂತು ಪ್ರಧಾನಿ ಅಂತಿಮ ವಿದಾಯ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಸೇರಿ ಹಲವು ಗಣ್ಯರು ಭಾಗಿಯಾಗದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!