ಈಕೆ ಭಾರತದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಉದ್ಯಮಿ: ಆಕೆಯ ಆಸ್ತಿಯೆಷ್ಟಿದೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇವರ ಹೆಸರು ʼಕನಿಕಾ ಟೇಕ್ರೀವಾಲ್‌ʼ. ಇತ್ತೀಚೆಗೆ ಪ್ರಕಟಗೊಂಡಿರುವ ಕೊಟಕ್ ಖಾಸಗಿ ಬ್ಯಾಂಕಿಂಗ್ ಹುರುನ್ 2021 ರ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಈಕೆಯ ಹೆಸರಿದೆ. ಭಾರತದಲ್ಲಿ ಕಿರಿಯ ವಯಸ್ಸಿನ ಸ್ವಯಂ ನಿರ್ಮಿತ (ಸೆಲ್ಫ್‌ ಮೇಡ್)‌ ಶ್ರೀಮಂತ ಉದ್ಯಮಿ ಎಂಬ ಕೀರ್ತಿಗೆ ಭಾಜನರಾಗಿರುವ ಇವರ ವಯಸ್ಸು ಮತ್ತು ಆಸ್ತಿ ಮೌಲ್ಯವನ್ನು ಕೇಳಿದರೆ ನೀವು ಖಂಡಿತ ಹುಬ್ಬೇರಿಸುತ್ತೀರಿ.

ಜೆಟ್‌ ಸೆಟ್‌ ಗೋ ಎಂಬ ಹೆಸರಿನ ವಿಮಾನ ಸಂಸ್ಥೆಯನ್ನು ಪ್ರಾರಂಭಿಸಿರುವ ಕನಿಕಾ ಟೇಕ್ರೀವಾಲರ ವಯಸ್ಸು ಕೇವಲ 33 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಕೆ ಸಂಪಾದಿಸಿರುವ ಆಸ್ತಿಯ ಮೌಲ್ಯ ಒಟ್ಟೂ 420 ಕೋಟಿ ರೂ. ಪ್ರಸ್ತುತ ಜೆಟ್‌ಸೆಟ್‌ಗೋ, ವಿಮಾನದ CEO ಮತ್ತು ಸಂಸ್ಥಾಪಕರಾಗಿರುವ ಇವರು ಇಂದಿನ ನವೋದ್ಯಮಿಗಳಿಗೆ ಮಾದರಿಯಾಗಿದ್ದಾರೆ. ಅವರು ಸಾಧಿಸಿತೋರಿಸಿರುವ ಯಶಸ್ಸಿನ ದಾಋಇ ಇಂದಿನ ಯುವ ಪೀಳಿಗೆಯಬ ಉದ್ಯಮಿ ಗಳಿಗೆ ಕನಸು ಸಾಧಿಸಬಹುದಾದ ವಾಸ್ತವ ಎಂಬುದನ್ನು ಸಾಬೀತು ಪಡಿಸುವಂತಿದೆ.

ಭೋಪಾಲ್‌ನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಇವರು ಜವಾಹರಲಾಲ್ ನೆಹರು ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಜೆಟ್‌ ಸೆಟ್‌ ಗೋ ಸ್ಥಾಪಿಸುವ ಮೂಲಕ ಶ್ರೀಮಂತ ಮಹಿಳೆಯರ ಪಟ್ಟಿಗೆ ಸೇರಿದ ಅವರು ಸವೆಸಿದ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ. ಪ್ರಾಸಂಗಿಕ ಲೈಂಗಿಕತೆ(ಕ್ಯಾಶುವಲ್‌ ಸೆಕ್ಸಿಸಮ್) ಮತ್ತು ಅವರ ಕುಟುಂಬದ ಸಂಪ್ರದಾಯವಾದಿ ದೃಷ್ಟಿಕೋನಗಳೊಂದಿಗೆ ಹೋರಾಡಿದ‌ ಅವರು 30ನೇ ವಯಸ್ಸಿನಲ್ಲಿ ಮಹಾಮಾರಿ ಕ್ಯಾನ್ಸರ್‌ ರೋಗಕ್ಕೂ ತುತ್ತಾದರು ಆದರೂ ಛಲಬಿಡದೇ ರೋಗದ ವಿರುದ್ಧ ಹೋರಾಡುತ್ತಲೇ ಭಾರತದಲ್ಲಿ ಖಾಸಗಿ ಜೆಟ್‌ಗಳು ಮತ್ತು ಹೆಲಿಕಾಪ್ಟರ್ ಚಾರ್ಟರ್‌ಗಳಿಗೆ ಮೊದಲ ಮಾರುಕಟ್ಟೆಯನ್ನು ಸ್ಥಾಪಿಸಲು ಸಫಲರಾದರು.

ಎಂಬಿಎ ಪದವೀಧರರಾದ ಇವರು ತಮ್ಮ ಸ್ನೇಹಿತ ಸುಧೀರ್ ಪೆರ್ಲ ಅವರೊಂದಿಗೆ 2012 ರಲ್ಲಿ ಜೆಟ್‌ಸೆಟ್‌ಗೋವನ್ನು ಸ್ಥಾಪಿಸಿದರು, ಇಂದು ಕಂಪನಿಯು 10 ಖಾಸಗಿ ಜೆಟ್‌ಗಳನ್ನು ಹೊಂದಿದೆ. ಜೆಟ್‌ ಸೆಟ್‌ ಗೋ ಕಂಪನಿಯು ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಹಾರಾಟ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿನ ಶ್ರೀಮಂತರ ವಿಮಾನಯಾಣ ಸೌಲಭ್ಯಗಳನ್ನೂ ಈನಕಂಪನಿ ನಿರ್ವಹಿಸುತ್ತದೆ, ಈ ಕಂಪನಿಯನ್ನು ಭಾರತೀಯ ಆಕಾಶದ ಊಬರ್‌ ಎಂತಲೂ ಕರೆಯಲಾಗುತ್ತದೆ. ವಿಮಾನ ಪ್ರಯಾಣವನ್ನು ಪ್ರಜಾಪ್ರಭುತ್ವಗೊಳಿಸುವುದು ಅವರ ಗುರಿ ಎಂದು ಕನಿಕಾ ಹೇಳುತ್ತಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!