ಶೀಜಾನ್‌ ಖಾನ್‌ ಮತಾಂತರಕ್ಕೆ ಒತ್ತಡ ಹೇರುತ್ತಿದ್ದ: ತುನೀಶಾ ತಾಯಿ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಹ ನಟ ಮತ್ತು ಬಾಯ್‌ ಪ್ರೆಂಡ್‌ ಶೀಜಾನ್ ಖಾನ್ ಇಸ್ಲಾಂಗೆ ಮತಾಂತರಗೊಳ್ಳುವಂತೆ ‌ತುನಿಶಾ ಶರ್ಮಾ ಮೇಲೆ ಒತ್ತಡ ಹೇರುತ್ತಿದ್ದ ಎಂದು ಮೃತ ನಟಿಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
ಇದು ಕೊಲೆಯೂ ಆಗಿರಬಹುದು. ಆಕೆಯ (ತುನೀಶಾ) ಮೃತದೇಹವನ್ನು ಕೆಳಗಿಳಿಸುವಾಗ ಶೀಜಾನ್ ಅಲ್ಲಿಯೇ ಇದ್ದ” ಎಂದು ತುನೀಶಾ ತಾಯಿ ವನಿತಾ ಆರೋಪಿಸಿದ್ದಾರೆ.
ʼಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಒಂದು ದಿನದ ಮೊದಲು ನಾನು ಸೆಟ್‌ಗೆ ಭೇಟಿ ನೀಡಿದ್ದೆ. ಆಗ ಶೀಜನ್‌ನ ವರ್ತನೆಗಳು ನನ್ನ ಗಮನಕ್ಕೆ ಬಂದಿದ್ದವು ಎಂದು ತುನಿಶಾ ತಾಯಿ ಹೇಳಿದ್ದಾರೆ. ಅವನು ಮತ್ತು ಅವನ ಕುಟುಂಬವು ತನ್ನ ಮಗಳ ಖ್ಯಾತಿಯನ್ನು ಲಾಭಕ್ಕಾಗಿ ಬಳಿಸಿಕೊಂಡರು ಎಂದು ಅವರು ಆರೋಪಿಸಿದ್ದಾರೆ. ತುನಿಶಾ ನಿಧನದ ನಂತರ ಶೀಜಾನ್ ಖಾನ್ ನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಶೀಜನ್ ಮತ್ತು ತುನೀಶಾ ಅವರ ಫೋನ್‌ನಿಂದ ಸುಮಾರು 250 ಪುಟಗಳ ವಾಟ್ಸಾಪ್ ಚಾಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದನ್ನು ಮತ್ತಷ್ಟು ವಿಶ್ಲೇಷಿಸಲಾಗುವುದು. ತುನೀಶಾ ಸಾವಿಗೆ 15 ದಿನಗಳ ಮೊದಲು ಶೀಜಾನ್‌ ಖಾನ್‌ ಜೊತೆಗೆ ಬ್ರೇಕಪ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!