ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕನೊಬ್ಬ ಪಾದಚಾರಿ ಮಾರ್ಗದಲ್ಲಿ ಡ್ಯಾನ್ಸ್ ಮಾಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳದಲ್ಲಿ ಬಸ್‌ಗಾಗಿ ಕಾಯುತ್ತಿದ್ದವರೆಲ್ಲಾ ಯುವಕನ ವರ್ತನೆಗೆ ಒಮ್ಮೆಲೆ ಗೊಂದಲಕ್ಕೊಳಗಾದರು. ರಸ್ತೆಯಲ್ಲಿ ಮಲಗಿದ್ದ ಯುವಕ ಇದ್ದಕ್ಕಿದ್ದಂತೆ ಎದ್ದು ನೃತ್ಯ ಮಾಡಿದ್ದಾನೆ. ಜನಸಂದಣಿ ಇರುವ ಜಾಗಕ್ಕೆ ಹೋಗಿ ಎಲ್ಲರ ಮಧ್ಯೆ ರೋಹಿತ್ ಕುಮಾರ್ ಎಂಬ ಯುವಕ ಎದ್ದು ಹೆಜ್ಜೆ ಹಾಕಿರುವುದು ಟೀಕೆ/ ಮೆಚ್ಚುಗೆಗೆ ಕಾರಣವಾಗಿದೆ.
ಈ ವಿಡಿಯೋವನ್ನು ರೋಹಿತ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿದ್ದಕ್ಕೆ ನೆಟಿಜನ್‌ಗಳು ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ಆದರೆ, ಎಲ್ಲರ ನಡುವೆ ಈ ರೀತಿ ಕುಣಿಯುವುದರಲ್ಲಿ ಏನು ಪ್ರಯೋಜನ ಎಂದು ಕೆಲವರು ಟೀಕಿಸುತ್ತಿದ್ದಾರೆ.