ಸುಪರ್‌ ವುಮನ್‌ ಆಗಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್‌ ನ ಮಾದಕ ಬೆಡಗಿ ಶಿಲ್ಪಾಶೆಟ್ಟಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವುಳಿದಿದ್ದರು. ಆದರೀಗ ಹೊಸ ಪೋಸ್ಟ್‌ ಒಂದನ್ನು ಮಾಡಿರುವ ಅವರು ತಮ್ಮ ಹೊಸ ಅವತಾರದೊಂದಿಗೆ ಕಾಣಿಸಿಕೊಂಡಿದ್ದಾರೆ.

ತಮ್ಮ ಮುಂದಿನ ಚಿತ್ರ ʼನಿಕಮ್ಮಾʼ ದಲ್ಲಿ ʼಸುಪರ್‌ ವುಮನ್‌ʼ ಆಗಿ ಕಾಣಿಸಿಕೊಳ್ಳುತ್ತಿರುವ ಅವರು ಚಿತ್ರದ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಸುಪರ್‌ ವುಮನ್‌ ಬಟ್ಟೆ ಧರಿಸಿರುವ ಅವರ ಈ ಸುಪರ್‌ ಹೀರೋ ಲುಕ್‌ ನೋಡಿ ಅಭಿಮಾನಿಗಳು ಸಪ್ರೈಸ್‌ ಆಗಿದ್ದಾರೆ. ಅಭಿಮಾನಿಯೊಬ್ಬರು ಅವರನ್ನು ವಂಡರ್‌ ವುಮನ್‌ ಗೆ ಹೋಲಿಸಿ ʼದೇಸಿ ಗಲ್‌ ಗಡೋಟ್‌ʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಹಿಂದೆ ನಾನು ಹೊಸ ಅವತಾರವನ್ನು ಕಂಡುಕೊಳ್ಳುವವರೆಗೆ ಸಾಮಾಜಿಕ ಮಾಧ್ಯಮದಿಂದ ಹೊರಗುಳಿಯುತ್ತೇನೆ ಎಂದು ಸಾಮಾಜಿಕ ಜಾಲ ತಾಣಗಳಿಂದ ಅವರು ದೂರವುಳಿದಿದ್ದರು. ಅದೀಗ ಪ್ರಚಾರದ ಗಿಮಿಕ್‌ ಎಂಬುದು ಸಾಬೀತಾಗಿದೆ. ಪ್ರಸ್ತುತ ಅವರು ಹೊರ ಹಾಕಿರುವ ಪೋಸ್ಟರ್‌ ಮಾರ್ವೆಲ್‌, ಡಿಸಿ ಗಳಂತೆ ಭಾರತೀಯ ಸುಪರ್‌ ವುಮನ್‌ ಅನ್ನು ಹುಟ್ಟು ಹಾಕಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!