ಹೊಸದಿಗಂತ ವರದಿ, ಶಿವಮೊಗ್ಗ :
ಬಿಸಿಲಿನ ಬೇಗೆಯಿಂದ ಬಳಲಿದ್ದ ಶಿವಮೊಗ್ಗ, ಭದ್ರಾವತಿ ನಗರಕ್ಕೆ ಗುರುವಾರ ಸಂಜೆ ಬಿದ್ದ ಮಳೆ ತಂಪೆರೆದಿದೆ.
ಏಪ್ರಿಲ್ ಆರಂ‘ದಿಂದಲೂ ಶಿವಮೊಗ್ಗ ನಗರದಲ್ಲಿ ಬಿಸಿಲಿನ ಝಳ ಜನರನ್ನು ಬಾಧಿಸುತ್ತಿದೆ. ಇಲ್ಲಿನ ತಾಪಮಾನ 38 ಡಿಗ್ರಿ ಸೆಲ್ಷಿಯಸ್‌ವರೆಗೂ ಏರಿಕೆ ಕಂಡಿದೆ. ಇದರಿಂದಾಗಿ ಜನರು ಮಧ್ಯಾಹ್ನದ ಅವಯಲ್ಲಿ ಸಂಚಾರ ಮಾಡುವುದೇ ದುಸ್ತರ ಎನಿಸಿತ್ತು. ಅರ್ಧ ಗಂಟೆ ಬಿಸಿಲಿನಲ್ಲಿ ಓಡಾಡಿದವರು ಸುಸ್ತಾಗಿ ವಾಪಾಸ್ ಬರುವ ಸ್ಥಿತಿ ಇತ್ತು.
ಬಿಸಿಲ ಕಾವು ನಡುವೆಯೇ ಚುನಾವಣಾ ಕಾವು ಕೂಡ ಶುರುವಾಗಿದ್ದು, ಜನರನ್ನು ಸೇರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು.
ಇದರ ನಡುವೆ ಗುರುವಾರ ಸಂಜೆ ಗುಡುಗು ಸಹಿತ ಮಳೆ ಬಂದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬಂದ ಮಳೆಯಿಂದ ವಾತಾವರಣ ತಂಪಾಗಿದೆ. ಆದರೆ ನಗರದ ಹೊರ ವಲಯದಲ್ಲಿ ಮಳೆ ಆಗಿಲ್ಲ. ಮಳೆ ಬಂದು ಭೂಮಿ ತಂಪಾಗಲಿ ಎಂಬ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ.