Friday, March 24, 2023

Latest Posts

ಶಿವಮೊಗ್ಗದಲ್ಲಿ ‘ಅಕ್ಕಮಹಾದೇವಿ ಪ್ರತಿಮೆ’ ಅನಾವರಣಗೊಳಿಸಿದ ಸಿಎಂ ಬೊಮ್ಮಾಯಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ಕಮಹಾದೇವಿಯ 78 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಆಕೆಯ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ನಿರ್ಮಿಸಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಇಂದು ಅನಾವರಣಗೊಳಿಸಿದ್ದಾರೆ.

769 ಕೋಟಿ ವೆಚ್ಚದಲ್ಲಿ ಶಿವಮೊಗ್ಗದ ಉಡುತಡಿಯಲ್ಲಿ 78 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ದೆಹಲಿಯ ‘ಅಕ್ಷರ ಧಾಮ’ದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಶಿವಮೊಗ್ಗದ ಶಿಲ್ಪಿ ಶ್ರೀಧರಮೂರ್ತಿ ಎಂಬುವವರು ಈ ಪ್ರತಿಮೆಯನ್ನು ರೂಪಿಸಿದ್ದು, ಇಷ್ಟಲಿಂಗ ಹಿಡಿದು ಕುಳಿತಿರುವ ಭಂಗಿಯ ಅಕ್ಕಮಹಾದೇವಿಯ ಪ್ರತಿಮೆ ಕಂಚಿನ ಬಣ್ಣದಲ್ಲಿ ಒಡಮೂಡಿದೆ. ಪ್ರತಿಮೆಯನ್ನು 14 ಅಡಿಯ ಸ್ತಂಭದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಅಕ್ಕಮಹಾದೇವಿಯ 78 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಆಕೆಯ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ನಿರ್ಮಿಸಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!