ಹೊಸದಿಗಂತ ಅಂಕೋಲಾ:
ಶಿರೂರು ಗುಡ್ಡ ಕುಸಿತದ ಮೂರನೇ ಹಂತದ ಶೋಧ ಕಾರ್ಯಾಚರಣೆ ಎರಡನೇ ದಿನಕ್ಕೆ ಮುಂದುವರಿದಿದ್ದು ಗಂಗಾವಳಿ ನದಿ ಯಲ್ಲಿ ತಲೆ ಕೆಳಗಾಗಿ ಬಿದ್ದ ಸ್ಥಿತಿಯಲ್ಲಿ ಇರುವ ಲಾರಿಯನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಪತ್ತೆ ಹಚ್ಚಿದ್ದಾರೆ.
ಗಂಗಾವಳಿ ನದಿಯಲ್ಲಿ ಬಿದ್ದ ಲಾರಿಯ ಎರಡು ಟಯರ್ ಕಾಣುತ್ತಿದ್ದು ಇದು ಕೇರಳದ ಅರ್ಜುನ್ ಇರುವ ಭಾರತ್ ಬೆಂಜ್ ಲಾರಿ ಆಗಿರಬಹುದು ಎನ್ನಲಾಗುತ್ತಿದೆ.
ಸಂಬಂದಿಸಿದ ಅಧಿಕಾರಿಗಳು ಬಂದು ಲಾರಿ ಮೇಲೆತ್ತುವ ಕೆಲಸ ನಡೆಯಬೇಕಿದ್ದು ಲಾರಿ ಮೇಲೆ ಬಂದ ಮೇಲೆ ಆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.