ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಿವರಾಜ್ ಕುಮಾರ್ ಹಾಗೂ ನಟ ಡಾಲಿ ಧನಂಜಯ್ ಅಭಿನಯಿಸುತ್ತಿರುವ ಚಿತ್ರ ಬೈರಾಗಿ. ಇದೀಗ ಈ ಚಿತ್ರದಲ್ಲಿ ಶಿವಣ್ಣನ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬೈರಾಗಿ, ಶಿವರಾಜ್ ಕುಮಾರ್ ಅವರ 123ನೇ ಚಿತ್ರವಾಗಿದ್ದು, ಸಿನಿಮಾ ಶೂಟಿಂಗ್ ಅಂತಿಮ ಹಂತದಲ್ಲಿದೆ. ಈ ನಡುವೆ ಶಿವರಾಜ್ ಕುಮಾರ್ ಅವರ ಹೊಸ ಲುಕ್ ನ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಶಿವಣ್ಣ ಬ್ಲ್ಯಾಕ್ ಶರ್ಟ್ ನಲ್ಲಿ ಮಾಸ್ ಲುಕ್ ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಅಂಜಲಿ ಕಾಣಿಸಿಕೊಳ್ಳಲಿದ್ದು, ಪೃಥ್ವಿ ಅಂಬಾರ್, ಶಶಿಕುಮಾರ್ ಪ್ರಮುಖ ಪಾತ್ರದಲ್ಲಿ ರಂಜಿಸಲಿದ್ದಾರೆ.
ಈ ಚಿತ್ರವನ್ನು ಕೃಷ್ಣ ಕ್ರಿಯೇಷನ್ಸ್ ನ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ