ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಬಿಜಾಪುರ ಜಿಲ್ಲೆಯಲ್ಲಿ ಮೂವರು ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹತರಾದ ಮೂವರು ನಕ್ಸಲರು ಮಾವೋವಾದಿ ಗುಂಪಿಗೆ ಸೇರಿದ್ದಾರೆ. ಸಿಪಿಐಗೆ ಸಂಬಂಧಿಸಿದ ಮೂವರು ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸುವ ಬಗ್ಗೆ ಮಾಹಿತಿ ದೊರೆತಿದೆ ಎಂದು ಬಸ್ತಾರ್ ರೇಂಜ್‌ನ ಐಜಿಪಿ ಪಿ. ಸುಂದರ್‌ರಾಜ್ ಹೇಳಿದ್ದಾರೆ.
ನಕ್ಸಲರಾದ ಕಮ್ಲು ಪುನೆಮ್ ಮತ್ತು ಮಂಗಿ ವಿವಾಹದ ಕಾರಣಕ್ಕೆ ಕ್ಯಾಂಪ್‌ನಿಂದ ಹೊರಬಂದಿದ್ದರು ಎನ್ನಲಾಗಿದೆ. ಇನ್ನೊಬ್ಬಾತನ ಬಗ್ಗೆ ಮಾಹಿತಿ ದೊರಕಿಲ್ಲ. ಮೂರನೇ ನಕ್ಸಲನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.