ಅಫ್ಘಾನ್ ಮಹಿಳೆಯರಿಗೆ ಮತ್ತೆ ಶಾಕ್: ಇನ್ಮುಂದೆ ಪಾರ್ಕ್, ಜಿಮ್ ಗಳಿಗೆ ತೆರಳುವಂತಿಲ್ಲ ಎಂದ ತಾಲಿಬಾನ್ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದ ಮಹಿಳೆಯರಿಗೆ ಮ್ಯೂಸ್‍ಮೆಂಟ್ ಪಾರ್ಕ್‍ಗಳಿಗೆ ಹಾಗೂ ಜಿಮ್ ಗಳಿಗೆ ತೆರಳಲು ತಾಲಿಬಾನ್ ಸರ್ಕಾರ ನಿಷೇಧ ಹೇರಿದೆ.
ಸದ್ಗುಣ ಮತ್ತು ಪ್ರಿವೈನ್ಶನ್ ಆಫ್ ವೈಸ್ (ಎಂಪಿವಿಪಿವಿ) ಪ್ರಚಾರ ಸಚಿವಾಲಯದ ವಕ್ತಾರರು, ಮಹಿಳೆಯರಿಗೆ ಕಾಬೂಲ್‌ನ ಅಮ್ಯೂಸ್‍ಮೆಂಟ್ ಪಾರ್ಕ್‍ಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಜಿಮ್‌ಗಳಿಗೂ ಪ್ರವೇಶಿಸದಂತೆನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಲವಾರು ಮಹಿಳೆಯರು ಪಾರ್ಕ್ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೇ ಕೆಲವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ಮಹಿಳೆಯರ ಚಲನೆ, ವಾಕ್, ಅಭಿವ್ಯಕ್ತಿ, ಕೆಲಸದ ಅವಕಾಶಗಳು ಹಾಗೂ ಉಡುಪಿನ ಸ್ವಾತಂತ್ರ್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!