ನಿಗಮ ಮಂಡಳಿ ಅಧ್ಯಕ್ಷರಿಗೆ ಶಾಕ್: ರಾಜ್ಯ ಸರ್ಕಾರದಿಂದ ರದ್ದತಿಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ಮುಖ್ಯಮಂತ್ರಿ ಎಸ್.ಯಡಿಯೂರಪ್ಪರ ಕಾಲದಲ್ಲಿ ನಾಮನಿರ್ದೇಶನಗೊಂಡಿದ್ದ ರಾಜ್ಯಮಟ್ಟದ ನಿಗಮ- ಮಂಡಳಿ- ಪ್ರಾಧಿಕಾರಗಳ ಅಧ್ಯಕ್ಷರ-ಉಪಾಧ್ಯಕ್ಷರನ್ನು ರದ್ದು ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಆದೇಶ ಇಂದೇ ಜಾರಿಯಾಗಿದೆ. ಜು.14ರಂದು ಹೊಸ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಪಟ್ಟಿ ಪ್ರಕಟವಾಗಲಿದೆ.
ನಿಗಮ-ಮಂಡಳಿ-ಪ್ರಾಧಿಕಾರಕ್ಕೆ ನಡೆದಿದ್ದ ನಾಮನಿರ್ದೇಶನ ರದ್ದತಿಯಿಂದ ಹೊಸ ಮುಖಗಳಿಗೆ ಅವಕ್ಷ ಸಿಗಲಿದೆ.
ಹೊಸ ನಿಗಮ ಮಂಡಳಿಗಳ ನೇಮಕದ‌ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಅಡಗಿದ್ದು, ತಳಮಟ್ಟದ ಕಾರ್ಯಕರ್ತರು ಹಾಗೂ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಹೊಸ ಪಟ್ಟಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಎಂಬ ಚರ್ಚೆ ಶುರುವಾಗಿದೆ.
ಸಂಪುಟ ಪುನಾರಚನೆ ಬದಲು ನಿಗಮ ಮಂಡಳಿಯಲ್ಲಿ ಬದಲಾವಣೆ ಮಾಡಿ, ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕೊಟ್ಟು ಸಮಾಧಾನ‌ ಪಡಿಸುವ ಲೆಕ್ಕಾಚಾರದಲ್ಲಿರುವ ರಾಜ್ಯ ಸರ್ಕಾರ, ಕೆಲ ಶಾಸಕರಿಗೂ ಅವಕಾಶ ನೀಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!