October 6, 2026
Tuesday, October 6, 2026
spot_img

ಏಷ್ಯಾಕಪ್ ಗೆದ್ದ ಖುಷಿಯಲ್ಲೇ ಕ್ರಾಂತಿ ಗೌಡ್‌ಗೆ ಶಾಕ್: ಪಂದ್ಯ ಶುಲ್ಕದ 10% ದಂಡ ಹಾಕಿದ ICC

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ವಿರುದ್ಧದ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಅಮೋಘ ಗೆಲುವು ಸಾಧಿಸಿ ಭಾರತ ತಂಡ 8ನೇ ಬಾರಿ ಟ್ರೋಫಿ ಎತ್ತಿಹಿಡಿದ ಬೆನ್ನಲ್ಲೇ ವೇಗಿ ಕ್ರಾಂತಿ ಗೌಡ್‌ಗೆ ಐಸಿಸಿ ಶಾಕ್ ನೀಡಿದೆ.

ಪಂದ್ಯದ ವೇಳೆ ಐಸಿಸಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕ್ರಾಂತಿ ಗೌಡ್‌ಗೆ ಪಂದ್ಯದ ಶುಲ್ಕದ ಶೇ.10ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.

ಪೆವಿಲಿಯನ್‌ನತ್ತ ಕೈ ಸನ್ನೆ ಮಾಡಿದ್ದ ಕ್ರಾಂತಿ

ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಆರಂಭಿಕ ಆಟಗಾರ್ತಿ ಇಮೇಶಾ ದುಲಾನಿ ಅವರನ್ನು ಔಟ್ ಮಾಡಿದ ಬಳಿಕ ಕ್ರಾಂತಿ ಗೌಡ್ ಪೆವಿಲಿಯನ್‌ನತ್ತ ಕೈ ಸನ್ನೆ ಮಾಡಿದ್ದರು. ಈ ನಡೆ ಬ್ಯಾಟರ್‌ನ್ನು ಕೆರಳಿಸುವ ಅಥವಾ ಅವಮಾನಿಸುವ ರೀತಿಯದ್ದಾಗಿರಬಹುದು ಎಂದು ಪರಿಗಣಿಸಿ ಐಸಿಸಿ ಕೋಡ್ ಆಫ್ ಕಂಡಕ್ಟ್‌ನ ಆರ್ಟಿಕಲ್ 2.5 ಅಡಿಯಲ್ಲಿ ಆರೋಪ ಹೊರಿಸಲಾಯಿತು.

ಇದನ್ನೂ ಓದಿ:

ಕ್ರಾಂತಿ ಗೌಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪಂದ್ಯ ರೆಫರಿ ಸುಪ್ರಿಯಾ ರಾಣಿ ದಾಸ್ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. 24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ಅಪರಾಧವಾಗಿರುವುದರಿಂದ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.

ಪಾಕ್ ಗೂ ಬಿತ್ತು ದಂಡ

ಇದೇ ವೇಳೆ ಶ್ರೀಲಂಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದ ಪಾಕಿಸ್ತಾನ ಮಹಿಳಾ ತಂಡಕ್ಕೂ ದಂಡ ವಿಧಿಸಲಾಗಿದೆ. ನಿಗದಿತ ಸಮಯದಲ್ಲಿ ಒಂದು ಓವರ್ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ತಂಡದ ಆಟಗಾರರಿಗೆ ಪಂದ್ಯದ ಶುಲ್ಕದ ಶೇ.5ರಷ್ಟು ದಂಡ ವಿಧಿಸಲಾಗಿದೆ. ನಾಯಕಿ ಫಾತಿಮಾ ಸನಾ ಈ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.

Must Read