Thursday, March 30, 2023

Latest Posts

ಮದ್ಯ ಪ್ರಿಯರಿಗೆ ಶಾಕ್: ಪ್ರತಿ ಬಾಟಲ್ ಮೇಲೆ 10 ರೂ. ಗೋ ತೆರಿಗೆ ವಿಧಿಸಿದ ಹಿಮಾಚಲ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶ (Himachal Pradesh) ಸರ್ಕಾರವು ಮದ್ಯಪಾನ ಪ್ರಿಯರಿಗೆ ಶಾಕ್ ನೀಡಿದ್ದು, ಪ್ರತಿ ಬಾಟಲ್ ಮದ್ಯದ ಮೇಲೆ 10 ರೂ. ‘ಗೋ ತೆರಿಗೆ (Cow Cess)’ ವಿಧಿಸುವ ಬಗ್ಗೆ ಬಜೆಟ್​​ನಲ್ಲಿ ಘೋಷಣೆ ಮಾಡಿದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸುರೇಶ್ ಕುಮಾರ್ ಸುಖು ಮಾರ್ಚ್ 15ರಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದರು. ಇದರಲ್ಲಿ ‘ಗೋ ತೆರಿಗೆ’ ವಿಧಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ರಾಜ್ಯದ ಆರ್ಥಿಕ ಚಟುವಟಿಕೆಯಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಹಸು ಸಾಕಾಣಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ . ಈ ಮೂಲಕ ವಾರ್ಷಿಕ ನೂರು ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನು ಹಿಮಾಚಲ ಪ್ರದೇಶ ಸರ್ಕಾರ ಹೊಂದಿದೆ.

ಈ ಬಜೆಟ್ ಔಪಚಾರಿಕವಾಗಿರದೆ ರಾಜ್ಯಕ್ಕೆ ಹೊಸ ದಿಕ್ಕು ನೀಡುವ ಬಜೆಟ್ ಆಗಿದೆ. ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಶೇ 50ರಷ್ಟು ಸಬ್ಸಿಡಿ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!