ಧರ್ಮಸ್ಥಳಕ್ಕೆ ಬಂತು ಭಾರತೀಯ ರಕ್ಷಣಾ ಸಚಿವಾಲಯದಿಂದ ‘ಟಿ-565 ಟ್ಯಾಂಕ್’!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತದ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ದಕ್ಷಿಣ ಕನ್ನಡದ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.

ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ.

1971ರ ಇಂಡೋ ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಇದು ಬಳಕೆಯಾಗಿದೆ.

ತಾಂತ್ರಿಕ ಮಾಹಿತಿ: 40 ಟನ್‍ಗಳಷ್ಟು ತೂಕ ಹೊಂದಿರುವ ಟ್ಯಾಂಕ್ 9 ಅಡಿ ಎತ್ತರ, 27.6 ಅಡಿ ಉದ್ದ ಮತ್ತು 10.8 ಅಗಲ ಹೊಂದಿದೆ. ಗರಿಷ್ಠ ವೇಗ: ಗಂಟೆಗೆ 51 ಕಿ.ಮೀ. ಸಾಮಥ್ರ್ಯ: 500 ಅಶ್ವಶಕ್ತಿ.
1968ರಲ್ಲಿ ಭಾರತೀಯ ಸೇನೆಗೆ ಇದನ್ನು ಸೇರಿಸಲಾಯಿತು. ಇದನ್ನು ಸೋವಿಯತ್ ಒಕ್ಕೂಟ ಸಿಬ್ಬಂದಿ ನಿರ್ಮಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!