SHOCKING | ಕಾಸರಗೋಡಿನಲ್ಲಿ ರೈಲು ಹಳಿ ತಪ್ಪಿಸಲು ಯತ್ನ: ಟ್ರ್ಯಾಕ್ ನಲ್ಲಿ ನಾಣ್ಯ, ಬಾಟಲಿಗಳು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರೈಲು ಹಳಿಯಲ್ಲಿ ಬಾಟಲಿ ಮತ್ತು ನಾಣ್ಯಗಳನ್ನಿರಿಸಿ ಬುಡಮೇಲುಗೊಳಿಸಲೆತ್ನಿಸಿದ ಘಟನೆ ಕಾಸರಗೋಡು ನಗರದಲ್ಲಿ ನಡೆದಿದೆ. ಕಾಸರಗೋಡು ನಗರದ ಪಳ್ಳಂ ರೈಲ್ವೇ ಅಂಡರ್ ಪ್ಯಾಸೇಜ್‌ನ ಮೇಲ್ಭಾಗದ ರೈಲು ಹಳಿಯಲ್ಲಿ ಈ ಕೃತ್ಯ ಎಸಗಲಾಗಿದೆ.

ಪ್ಲಾಸ್ಟಿಕ್ ಬಾಟಲಿ ಮತ್ತು ನಾಣ್ಯಗಳನ್ನು ಸೆಲ್ಲೋಟಾಪ್‌ನಲ್ಲಿ ಕಟ್ಟಿ ಅದನ್ನು ರೈಲು ಹಳಿ ಮೇಲೆ ಇರಿಸಲಾಗಿತ್ತು. ಇದರ ಮೇಲೆ ಸೋಮವಾರ ರೈಲೊಂದು ಹಾದು ಹೋಗಿದ್ದು ಆ ಬಳಿಕವಷ್ಟೇ ವಿಷಯವು ರೈಲ್ವೇ ಸಿಬ್ಬಂದಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ರೈಲ್ವೇ ಸೀನಿಯರ್ ಸೆಕ್ಷನ್ ಇಂಜಿನಿಯರ್ ಎಂ.ರಂಜಿತ್ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಸರಗೋಡು ನಗರ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಪಿ.ನಳಿನಾಕ್ಷನ್ ನೇತೃತ್ವದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರೈಲು ಹಳಿ ಮೇಲೆ ಈ ಸಾಮಗ್ರಿಗಳನ್ನು ಇರಿಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಆ ಪರಿಸರದ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!