SHOCKING | ಹಾಸನ, ಕೊಡಗು ಬಳಿಕ ಸುಳ್ಯದಲ್ಲೂ ನಡುಗಿದ ಭೂಮಿ: ಮನೆಗಳಲ್ಲಿ ಬಿರುಕು

ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಶನಿವಾರ ಭೂಮಿ ಕಂಪಿಸಿದ್ದು, ಜನತೆಯಲ್ಲಿ ಭಯಾತಂಕ ಮೂಡಿಸಿದೆ.
ಶನಿವಾರ ಬೆಳಗ್ಗೆ ಈ ಭಾಗಗಳಲ್ಲಿ ಸುಮಾರು 45 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಸುಳ್ಯ, ಮರ್ಕಂಜ, ಕಲ್ಲುಗುಂಡಿ, ಸಂಪಾಜೆ, ಪೆರಾಜೆ, ಅರಂತೋಡು, ಐವರ್ನಾಡು, ತೊಡಿಕಾನ, ಗೂನಡ್ಕ ಸೇರಿದಂತೆ ತಾಲೂಕಿನ ವಿವಿಧೆಡೆ ಈ ಕಂಪನ ಸ್ಪಷ್ಟವಾಗಿ ಜನತೆಯ ಅನುಭವಕ್ಕೆ ಬಂದಿದೆ.
ಈ ಘಟನೆಯಲ್ಲಿ ಕೆಲವು ಮನೆಗಳ ಗೋಡೆಗಳು ಬಿರುಕುಬಿಟ್ಟಿದ್ದು, ಮನೆಯ ಮೇಲ್ಭಾಗಕ್ಕೆ ಹಾಕಲಾದ ಡಬ್ಬಿ, ಶೀಟ್‌ಗಳು ಕೂಡಾ ಧರೆಗುರುಳಿವೆ.
ಬೆಳಗ್ಗೆ ಸುಮಾರು 9.10ರ ಸಮಯದಲ್ಲಿ ಈ ಬೆಳವಣಿಗೆ ನಡೆದಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!