ಉಪಾಧ್ಯಾಯರು, ಭುಜಂಗನ ‘ಉಗ್ರ ಹೋರಾಟ’ ನೆನಪಿಸಿದ ಕೇರಳದ ನಡೆ…

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಮತ್ತೆ ಸುದ್ದಿಗೆ ಬಂದಿದೆ..
ಸರ್ಕಾರವು ಇಲ್ಲಿಗೆ ಕನ್ನಡಿಗ ಶೈಕ್ಷಣಿಕ ಜಿಲ್ಲಾ ಅಧಿಕಾರಿಯನ್ನು ವರ್ಗಾವಣೆಗೊಳಿಸಿ, ಮಲಯಾಳಿ ಅಧಿಕಾರಿಯನ್ನು ನೇಮಕ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕಾಸರಗೋಡು ಶೈಕ್ಷಣಿಕ ಜಿಲ್ಲೆ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿದೆ. ಇಲ್ಲಿಗೆ ಸಂವಿಧಾನಾತ್ಮಕವಾಗಿ ಕನ್ನಡಿಗ ಅಧಿಕಾರಿಯನ್ನೇ ನೇಮಿಸಬೇಕು ಎಂಬ ಆದೇಶವೂ ಇದೆ. ಆದರೆ ಸರ್ಕಾರ ಇದನ್ನು ಉಲ್ಲಂಘಿಸಿ ಮಲಯಾಳಿ ಅಧಿಕಾರಿಯನ್ನು ನೇಮಕಗೊಳಿಸಿರುವುದು ವ್ಯಾಪಕ ಆಕ್ಷೇಪಗಳಿಗೆ ಕಾರಣವಾಗಿದೆ.
ಜಿಲ್ಲಾ ಶಿಕ್ಷಣಾಧಿಕಾರಿ ಸ್ಥಾನಕ್ಕೂ ಮಲಯಾಳಿ ಅಧಿಕಾರಿಯನ್ನು ನೇಮಿಸಿ ಆದೇಶಿಸುವ ಮೂಲಕ ಸರ್ಕಾರದಿಂದ ಕಾಸರಗೋಡಿನಲ್ಲಿ ಕನ್ನಡವನ್ನು ದಮನಿಸುವ ಕೆಲಸಮಾಡಲಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!