ಮೆಟ್ರೋ ನಿಲ್ದಾಣದಲ್ಲಿ ಶಾಕಿಂಗ್ ಘಟನೆ: ಯುವತಿಯನ್ನು ಎಳೆದೊಯ್ದ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮುಂಬೈನ ಚಕಾಲ ಮೆಟ್ರೋ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವತಿಯನ್ನು ಮೆಟ್ರೋ ರೈಲು ಎಳೆದೊಯ್ದ ಘಟನೆ ನಡೆದಿದೆ. ಲೋಕೋ ಪೈಲಟ್ ನಿರ್ಲಕ್ಷ್ಯದಿಂದ ಗೌರಿ ಕುಮಾರ್ ಸಾಹು ಎಂಬ ಯುವತಿ ಅಪಾಯಕ್ಕೆ ಸಿಲುಕಿದ್ದಾಳೆ.

ಚಾಕಲಾ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಇಳಿಯುತ್ತಿದ್ದಾಗ ಯುವತಿಯ ಉಡುಗೆ ರೈಲಿನ ಸ್ವಯಂಚಾಲಿತ ಬಾಗಿಲಿಗೆ ಸಿಕ್ಕಿಹಾಕಿಕೊಂಡಿತ್ತು. ಇದನ್ನು ತನ್ನ ಪಕ್ಕದಲ್ಲಿದ್ದ ಕೋಚ್‌ನಲ್ಲಿದ್ದ ಲೋಕೋ ಪೈಲಟ್‌ಗೆ ಹೇಳಲು ಪ್ರಯತ್ನಿಸಿದಳು. ಹೊರಗಿದ್ದ ಒಬ್ಬ ಪ್ರಯಾಣಿಕ ಕೂಡ ಎಚ್ಚರಿಸಲು ಪ್ರಯತ್ನಿಸಿದನು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ನಿರ್ಲಕ್ಷಿಸಿದ ಲೋಕೋ ಪೈಲಟ್ ರೈಲನ್ನು ಚಲಾಯಿಸಿದ್ದಾರೆ.

ಘಟನೆಯಲ್ಲಿ ಆಕೆ ಗಾಯಗೊಂಡಿದ್ದು, ರೈಲ್ವೆ ಸಿಬ್ಬಂದಿ ಆಕೆಯನ್ನು ಚಿಕಿತ್ಸೆಗಾಗಿ ಅಂಧೇರಿಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!