SHOCKING VIDEO| ಮದುವೆ ಮಂಟಪದಲ್ಲಿಯೇ ವಧು-ವರರ ಉಗ್ರರೂಪ: ನೆಂಟರಿಷ್ಟರು ಕಂಗಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಪ್ತಪದಿ ತುಳಿದು ಹೊಸ ದಾಂಪತ್ಯಕ್ಕೆ ಕಾಲಿಡಬೇಕಾದ ನವದಂಪತಿ ಮದುವೆ ಮಂಟಪದಲ್ಲೇ ಒಬ್ಬರಿಗೊಬ್ಬರು ಹೊಡೆದಾಡಿದ್ದಾರೆ. ಮದುವೆಗೆ ಬಂದಿದ್ದ ನೆಂಟರಿಷ್ಟರು ಇವರ ವರ್ತನೆಗೆ ಶಾಕ್‌ ಆಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Instagram ಬಳಕೆದಾರರು ಶೇರ್ ಮಾಡಿರುವ ವಿಡಿಯೋದಲ್ಲಿ ವಧು ವರನಿಗೆ ಅಮಾನುಷವಾಗಿ ಒದ್ದಿದ್ದಾಳೆ. ವೇದಿಕೆಯಲ್ಲೇ ಇಬ್ಬರ ನಡುವೆ ಜಗಳಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ, ಆದರೆ ಎರಡೂ ಕಡೆಯವರು ಅವರನ್ನು ಬಿಡಿಸಲು ಪ್ರಯತ್ನಿಸಿದರೂ ಕೂಡ ಪ್ರಯೋಜನವಾಗಿಲ್ಲ. ಈ ಚೆಲ್ಲಾಟದಿಂದ ಅವರ ಭವಿಷ್ಯ ಏನಾಗುತ್ತೋ ಎಂದು ಎರಡೂ ಕುಟುಂಬದವರು ಬೆಚ್ಚಿಬಿದ್ದರು.

ಮದುವೆಯ ದಿನವೇ ವಿಚ್ಛೇದನಕ್ಕೆ ಅರ್ಜಿ ಹಾಕುವ ಹಾಗೆ ಕಾಣುತ್ತಿದೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!