ಸ್ಕ್ಯಾನರ್‌ ಬಳಸೋ ಅಂಗಡಿ ಮಾಲೀಕರೇ ಹುಷಾರ್‌, ಅಪ್ಡೇಡ್‌ ನೆಪದಲ್ಲಿ ಹಣ ಅಬೇಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಈಗೆಲ್ಲ ದೊಡ್ಡದೊಡ್ಡ ರೆಸ್ಟೋರೆಂಟ್ಸ್‌ಗಳಿಂದ, ಸಣ್ಣ ಸೊಪ್ಪು ತರಕಾರಿ ಅಂಗಡಿವರೆಗೂ ಸ್ಕ್ಯಾನರ್‌ ಬಳಕೆ ಮಾಡಲಾಗುತ್ತದೆ. ಈ ರೀತಿ ಅಂಗಡಿಗಳಲ್ಲಿ ಸ್ಕ್ಯಾನರ್‌ ಕಂಡರೆ ಸಾಕು ಅಪ್ಡೇಟ್‌ ಮಾಡುವ ನೆಪದಲ್ಲಿ ಹಣ ಎಗರಿಸುವ ಖದೀಮರಿದ್ದಾರೆ ಹುಷಾರ್‌!

ಬೆಂಗಳೂರಿನ ಕಲ್ಯಾಣ್‌ ನಗರದಲ್ಲಿ ಸ್ಕ್ಯಾನರ್‌ ಅಪ್‌ಡೇಟ್‌ ಎಂದು ಹೇಳಿ ಕಳ್ಳರು ಖಾತೆಯಲ್ಲಿದ್ದ 48,000 ರೂಪಾಯಿ ಎಗರಿಸಿದ್ದಾರೆ.

ಮಂಜುನಾಥ್ ಟಿಫನ್ ಸೆಂಟರ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಅಪ್ಡೇಟ್‌ ಮಾಡುತ್ತೇನೆ ಎಂದು ಯುಪಿಐನಿಂದ ಒಂದು ರೂಪಾಯಿ ಕಳಿಸಿಕೊಂಡು ಅಪ್ಡೇಟ್‌ ಆಗಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ. ಆತ ಹೋಗಿ ಒಂದೆರಡು ನಿಮಿಷಕ್ಕೆ ಅಕೌಂಟ್‌ನಲ್ಲಿದ್ದ ಎಲ್ಲ ಹಣ ಕಟ್‌ ಆದ ಮೆಸೇಜ್‌ ಬಂದಿದ್ದು, ಹೊಟೇಲ್‌ ಓನರ್‌ ಭಾಸ್ಕರ್‌ ಬೆಚ್ಚಿಬಿದ್ದಿದ್ದಾರೆ.

ದಿನವಿಡೀ ಕಷ್ಟಪಟ್ಟು ದುಡಿದ ಹಣ ಒಂದು ನಿಮಿಷದಲ್ಲಿ ಕಾಣೆಯಾಗಿದ್ದು, ಸತ್ಯ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!