August 20, 2026
Thursday, August 20, 2026
spot_img

ವರಮಹಾಲಕ್ಷ್ಮೀ ಹಬ್ಬಕ್ಕೆ ಶಾಪಿಂಗ್‌ ಜೋರು : ಕೆ.ಆರ್‌. ಮಾರುಕಟ್ಟೆಯಲ್ಲಿ ಜನಸಾಗರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆ ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹೆಣ್ಣುಮಕ್ಕಳ ನೆಚ್ಚಿನ ಹಬ್ಬ ಇದಾಗಿದ್ದು, ಅಂದವಾಗಿ ದೇವರನ್ನು ಅಲಂಕರಿಸಿ, ತಾವೂ ಅಲಂಕಾರ ಮಾಡಿಕೊಂಡು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಹಬ್ಬಕ್ಕಾಗಿ ವಾರದಿಂದಲೇ ತಯಾರಿ ಆರಂಭವಾಗಿದ್ದು, ಬೆಂಗಳೂರಿನ ಶಾಪಿಂಗ್‌ ಹಾಟ್‌ಸ್ಪಾಟ್‌ ಕೆ.ಆರ್‌ ಮಾರ್ಕೆಟ್‌ನಲ್ಲಿ ಜನಸಾಗರವೇ ತುಂಬಿದೆ. ಹಾರ, ಹೂವು, ಹಣ್ಣು, ತರಕಾರಿ, ದೇವರನ್ನು ಅಲಂಕರಿಸುವ ವಸ್ತುಗಳು ಹಾಗೂ ಇನ್ನಿತರ ಹಬ್ಬದ ವಸ್ತುಗಳಿಗಾಗಿ ಜನ ಮಾರ್ಕೆಟ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ವೀಕ್‌ಡೇ, ವೀಕ್‌ ಎಂಡ್‌ ಎಂದು ನೋಡದೇ ಮಾರ್ಕೆಟ್ ಕಿಷ್ಕಿಂದೆಯಂತೆ ಕಾಣಿಸುತ್ತಿದೆ.

ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಹೂವು ಹಣ್ಣುಗಳ ದರ ಹೆಚ್ಚಾಗುತ್ತದೆ. ಅದೇ ರೀತಿ ಈಗಲೂ ಹೂವು ಹಣ್ಣುಗಳ ದರ ಹೆಚ್ಚಾಗಿದ್ದು, ಗ್ರಾಹಕರ ಜೇಬು ಬಿಸಿಯಾಗಿದೆ. ಹೂವಿನ ಮಾರ್ಕೆಟ್‌ನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಇಡಲೂ ಆಗದಷ್ಟು ಜನ ನೆರೆದಿದ್ದಾರೆ. ನಾಳೆ ಹಣ್ಣು, ಹೂವು ಹಾಗೂ ತರಕಾರಿಯ ದರ ಗಗನಕ್ಕೇರುವ ಭಯದಲ್ಲಿ ವಾರದಿಂದಲೂ ಜನ ಶಾಪಿಂಗ್‌ನಲ್ಲಿ ನಿರತರಾಗಿದ್ದಾರೆ.

ಒಂದು ಕೆಜಿ ಮಲ್ಲಿಗೆ ಹೂವಿನ ದರ ಒಂದರಿಂದ ಎರಡು ಸಾವಿರ ರೂಪಾಯಿವರೆಗೂ ಇದೆ. ಇನ್ನು ಗುಲಾಬಿ ಕೆಜಿಗೆ 400 ರೂ. ಸೇವಂತಿಗೆ – 1 ಕೆಜಿ – 500 ರಿಂದ 800 ರೂಪಾಯಿಯಷ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !