September 14, 2026
Monday, September 14, 2026
spot_img

ತೆರವು ಮಾಡಿದ ಜಾಗದಲ್ಲೇ ಮತ್ತೆ ಅಂಗಡಿ: ಬೆಂಗಳೂರು ಫುಟ್‌ಪಾತ್‌ಗಳ ಅತಿಕ್ರಮಣಕ್ಕೆ ಮುಕ್ತಿ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಫುಟ್‌ಪಾತ್‌ಗಳ ಮೇಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಪೊಲೀಸ್ ಇಲಾಖೆ ಹಲವು ಪ್ರದೇಶಗಳಲ್ಲಿ ಜಂಟಿಯಾಗಿ ಕ್ರಮ ಕೈಗೊಂಡಿದ್ದರೂ, ತೆರವುಗೊಳಿಸಿದ ಸ್ಥಳಗಳಲ್ಲೇ ಮತ್ತೆ ವ್ಯಾಪಾರ ಚಟುವಟಿಕೆಗಳು ಆರಂಭವಾಗುತ್ತಿರುವುದು ಕಂಡುಬಂದಿದೆ. ಜಯನಗರ, ಗಾಂಧಿ ಬಜಾರ್‌, ಸಿದ್ದಾಪುರ ಹಾಗೂ ಮಲ್ಲೇಶ್ವರಂನಲ್ಲಿ ಈ ಸಮಸ್ಯೆ ಮತ್ತೆ ಎದುರಾಗಿದೆ.

ಜಯನಗರದಲ್ಲಿ ಮತ್ತೆ ವ್ಯಾಪಾರ

ಜಯನಗರ 4ನೇ ಬ್ಲಾಕ್‌ನಲ್ಲಿ ಇತ್ತೀಚೆಗೆ ಫುಟ್‌ಪಾತ್ ತೆರವು ಮಾಡಲಾಗಿತ್ತು. ಆದರೆ ಇದೀಗ ವ್ಯಾಪಾರಿಗಳು ಮತ್ತೆ ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವಂತಾಗಿದೆ.

ನಿಮ್ಹಾನ್ಸ್ ಸಮೀಪದ ಸಿದ್ದಾಪುರದಲ್ಲಿ 40ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಹಲವು ಅಂಗಡಿಗಳು ಫುಟ್‌ಪಾತ್ ಆಕ್ರಮಿಸಿಕೊಂಡಿವೆ.

ಮಲ್ಲೇಶ್ವರಂನಲ್ಲೂ ಇದೇ ಸಮಸ್ಯೆ

ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದರೂ, ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹೂವು, ಪೂಜಾ ಸಾಮಗ್ರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮತ್ತೆ ಆರಂಭವಾಗಿದೆ.

ಇದನ್ನೂ ಓದಿ:

ಕ್ರಮದ ಜತೆಗೆ ನಿಗಾ ಅಗತ್ಯ

ಒತ್ತುವರಿ ತೆರವು ಮಾಡುವುದಷ್ಟೇ ಅಲ್ಲದೆ, ಮತ್ತೆ ಅತಿಕ್ರಮಣವಾಗದಂತೆ ನಿರಂತರ ನಿಗಾ ವಹಿಸುವ ಅಗತ್ಯವಿದೆ. ಇಲ್ಲವಾದರೆ ಪಾದಚಾರಿಗಳ ಸಮಸ್ಯೆ ಮುಂದುವರಿಯುವ ಸಾಧ್ಯತೆಯಿದೆ.

ಫುಟ್‌ಪಾತ್‌ಗಳು ಪಾದಚಾರಿಗಳ ಬಳಕೆಗೆ ಮುಕ್ತವಾಗಿರಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ. ತೆರವುಗೊಂಡ ಜಾಗವನ್ನು ಮತ್ತೆ ಆಕ್ರಮಿಸದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಮಾತ್ರ ಬೆಂಗಳೂರಿನ ಫುಟ್‌ಪಾತ್ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !