ಐಪಿಎಲ್ : ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ಸಾರಥಿಯಾಗಿ ಶ್ರೇಯಸ್ ಅಯ್ಯರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರನನ್ನು ಆಯ್ಕೆ ಮಾಡಿಕೊಂಡ ಬಳಿಕ ಇದೀಗ ತಮ್ಮ ನೂತನ ನಾಯಕನನ್ನು ಹೆಸರಿಸಿದ್ದು, ಶ್ರೇಯಸ್ ಅಯ್ಯರ್ ಅವರನ್ನು ಮುಂದಿನ ಕ್ಯಾಪ್ಟನ್‌ ಆಗಿ ನೇಮಿಸಲಾಗಿದೆ .
ಐಪಿಎಲ್ 2022ರ ಹರಾಜಿನಲ್ಲಿ ಅಯ್ಯರ್ 12.25ಕೋಟಿ ರೂ.ಗಳಿಗೆ ಕೆಕೆಆರ್ ಸೇರಿಕೊಂಡರು.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಕೆಕೆಆರ್ʼನ ಸಿಇಒ ಮತ್ತು ಎಂಡಿ ವೆಂಕಿ ಮೈಸೂರು, ‘ಶ್ರೇಯಸ್ ಅಯ್ಯರ್ ಅವರನ್ನ ಕೋಲ್ಕತ್ತಾ ನೈಟ್ ರೈಡರ್ಸ್ʼನ ಹೊಸ ನಾಯಕರನ್ನಾಗಿ ಹೆಸರಿಸಲಾಗಿದೆ. ಮಾರ್ಚ್ ಕೊನೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದ್ದು, 15ನೇ ಆವೃತ್ತಿಗೆ ಮುಂಚಿತವಾಗಿ ಫ್ರಾಂಚೈಸಿ ಘೋಷಿಸಲಾಗಿದೆ. ಅವರು ಅತ್ಯುನ್ನತ ಮಟ್ಟದಲ್ಲಿ ಗುಣಮಟ್ಟದ ಬ್ಯಾಟ್ಸ್ ಮನ್ ಆಗಿದ್ದು, ಕೆಕೆಆರ್ʼನ ನಾಯಕರಾಗಿ ಉತ್ತಮ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!