ಜ.15 ರಂದು ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಭೋಜನ ಶಾಲೆ, ಸಭಾಭವನ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಭೋಜನ ಶಾಲೆ ಮತ್ತು ಸಭಾಭವನದ ಉದ್ಘಾಟನಾ ಸಮಾರಂಭವು ಜ.14,15,16 ಎಂಬೀ ದಿನಗಳಂದು ನಡೆಯಲಿರುವುದು. ವೇದಮೂರ್ತಿ ಬಳ್ಳಪದವು ಡಾ. ಮಾಧವ ಉಪಾಧ್ಯಾಯರ ದಿವ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.
ಜ.14ರಂದು ಬೆಳಗ್ಗೆ 6.57ಕ್ಕೆ ದೀಪ ಪ್ರಜ್ವಲನೆ, ಭಜನೋತ್ಸವ ಉದ್ಘಾಟನೆ, ಮಧ್ಯಾಹ್ನ 1.15ಕ್ಕೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಿಂದ ಹಸಿರುವಾಣಿ ಹೊರೆಕಾಣಿಕೆ, ರಾತ್ರಿ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ನಡೆಯಲಿದೆ.
ಜ.15 ರಂದು ಬೆಳಗ್ಗೆ 6. ಗಂಟೆಯಿಂದ ಅಷ್ಟನಾಳಿಕೇರ ಮಹಾಗಣಪತಿ ಹೋಮ, 8 ಗಂಟೆಗೆ ಪೂರ್ಣಾಹುತಿ, ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಶ್ರೀ ಮಂದಿರದ ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಬಳ್ಳಪದವು ಡಾ. ಮಾಧವ ಉಪಾಧ್ಯಾಯ ಅವರ ಆಗಮನ, ಪೂರ್ಣಕುಂಭ ಸ್ವಾಗತ, 10.31 ರಿಂದ 12 ಗಂಟೆಯ ನಡುವಿನ ಶುಭಮುಹೂರ್ತದಲ್ಲಿ ಸಭಾಭವನ ಹಾಗೂ ಭೋಜನ ಶಾಲೆ ಉದ್ಘಾಟನೆ. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡಲಿದ್ದಾರೆ.
ಪ್ರಖ್ಯಾತ ಚಿಂತಕ ರಾಮ್ ಮಾಧವ್ ದೆಹಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ, ಅಪರಾಹ್ನ ಮಹಿಳಾ ಸಮಾವೇಶ ನಡೆಯಲಿದೆ. ಒಡಿಯೂರು ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯಿ ಅವರಿಂದ ಆಶೀರ್ವಚನ. ಕರ್ನಾಟಕದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ.
ಸಂಜೆ 7 ರಿಂದ ಸಬ್ಬಣಕೋಡಿ ರಾಮಭಟ್ ಶಿಷ್ಯವೃಂದದವರಿಂದ ಚಕ್ರ ಚಂಡಿಕೆ ಯಕ್ಷಗಾನ, 10 ಗಂಟೆಗೆ ಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ. ಜ.16 ರಂದು ಬೆಳಗ್ಗೆ ಭಜನೆ, 10.30 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಹಾಗೂ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆಯೂರು ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಮುಂದಾಳು ಸಂಜೀವ ಶೆಟ್ಟಿ ಮೊಟ್ಟೆಕುಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಭೋಜನ ಪ್ರಸಾದ.
ಅಪರಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ ಅವರಿಂದ ಆಶೀರ್ವಚನ, ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ ಹಾಗೂ ತೀಯ ಮಹಾಸಭಾದ ಕೇರಳ ರಾಜ್ಯ ಅಧ್ಯಕ್ಷ ಗಣೇಶ್ ಅರಮಂಗಾನ ಅವರಿಂದ ಧಾರ್ಮಿಕ ಭಾಷಣ. ಉದ್ಘಾಟನಾ ಸಮಿತಿಯ ಕಾರ್ಯಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಊರ ಪರವೂರ ಪ್ರಮುಖರು, ಧಾರ್ಮಿಕ ಮುಂದಾಳುಗಳು ವೇದಿಕೆಯನ್ನು ಅಲಂಕರಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!