ವಿಶ್ವ ಪವರ್ ಲಿಫ್ಟಿಂಗ್‌ ಬೆಂಚ್ ಪ್ರೆಸ್‌ ಚಾಂಪಿಯನ್‌ಶಿಪ್‌ ನಲ್ಲಿ ಬೆಳ್ಳಿ ಗೆದ್ದ ಸಿಯಾ, ಅಕ್ಷತಾಗೆ ಉಡುಪಿಯ ರೈಲು ನಿಲ್ದಾಣದಲ್ಲಿ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಜಕಿಸ್ತಾನದಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್‌ಬೆಂಚ್ ಪ್ರೆಸ್‌ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ. ದೇಶವನ್ನು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಏಳಿಂಜೆಯ ಸಿಯಾ ಶೆಟ್ಟಿ ಹಾಗೂ ಬೋಳ ಅಕ್ಷತಾ ಪೂಜಾರಿ ಬೆಳ್ಳಿ ಪದಕ ಪಡೆದಿದ್ದರೆ. ಇವರನ್ನು ಉಡುಪಿಯ ರೈಲು ನಿಲ್ದಾಣದಲ್ಲಿ ಬುಧವಾರ ರಾತ್ರಿ ಸ್ವಾಗತಿಸಲಾಯಿತು. ಈಶ್ವರ ಕಟೀಲ್ ಕೇಶವ ಕರ್ಕೇರ, ವಿಶ್ವನಾಥ್ ಶಟ್ಟಿ ಮತ್ತಿತರರಿದ್ದರು. ಸಿಯಾ ಮತ್ತು ಅಕ್ಷತಾ ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಮಂಗಳೂರಿನ ಎಎಸ್ಐ ವಿಜಯ ಕಾಂಚನ್ ಮತ್ತು ಈಶ್ವರ್ ಕಟೀಲ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!