ಹೊಸದಿಗಂತ ವರದಿ, ಚಿತ್ರದುರ್ಗ
ಸರಣಿ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ ಎಸ್‌ಐಟಿ, ಸಿಐಡಿ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಇದರಿಂದ ಜನರು ರಾಜಕಾರಣಿಗಳನ್ನು ಜನ ಅಟ್ಟಿಸಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ಚಿತ್ರದುರ್ಗ ನಗರದ ಹೂರವಲಯದ ಕ್ಯಾದಿಗೆರೆ ಸಮೀಪ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತ ಸರಿಯಿದ್ದರೆ ಹೀಗಾಗುತ್ತಿರಲಿಲ. ಶಾಸಕರಿಗೆ ಅಭಿವೃದ್ಧಿಗೆ ೧ ರೂಪಾಯಿ ಕೊಟ್ಟಿಲ್ಲ. ಶಾಸಕರು ಅಧಿಕಾರಿಗಳನ್ನು ಹಿಡಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಶಾಸಕರು ಆಫೀಸರ್ಸ್ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯರಂಥ ವರ್ಸ್ಟ್ ಸರ್ಕಾರ ಯಾವುದೂ ಇಲ್ಲ. ತಮ್ಮ ಕಣಜ ತುಂಬಿಕೊಳ್ಳುವುದನ್ನು ನೋಡುತ್ತಿದ್ದಾರೆಯೇ ಹೊರತು ಜನರ ಬಗ್ಗೆ ಚಿಂತೆ ಇಲ್ಲ ಎಂದು ಕಿಡಿಕಾರಿದರು.
ಸರಣಿ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ. ಎಸ್‌ಐಟಿ, ಸಿಐಡಿ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ರಾಜಕಾರಣಿಗಳಿಗೆ ಜನ ಅಟ್ಟಿಸಿಕೊಂಡು ಬರುವ ಸ್ಥಿತಿ ಬರುತ್ತದೆ. ಮತ ಬ್ಯಾಂಕ್ ಸೆಳೆಯಲು ಗ್ಯಾರಂಟಿ ಯೋಜನೆ ಘೋಷಣೆ. ಮೀನು ಕೊಡುವುದು ಬೇಡ ಮೀನು ಹಿಡಿಯಲು ಕಲಿಸಿ, ಎಸ್‌ಸಿಪಿ, ಟಿಎಸ್‌ಪಿಗೆ ಮೀಸಲಿದ್ದ ದಲಿತರ ಹಣವನ್ನು ಸರ್ಕಾರ ಬಳಸಿದೆ. ಸಿದ್ದರಾಮಯ್ಯ ಸರ್ಕಾರ ಮೋಸ ವಂಚನೆಗೆ ಹೆಸರಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಲೂಟಿಯಲ್ಲಿ ತೊಡಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಬಿಜೆಪಿ – ಜೆಡಿಎಸ್ ಪಾದಯಾತ್ರೆ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಾಗಿ ಬಿಜೆಪಿ – ಜೆಡಿಎಸ್ ಕುತಂತ್ರ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಪದವಿ ಇಳಿಸುವುದಕ್ಕೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚಲವಾದಿ ನಾರಾಯಣಸ್ವಾಮಿ, ಕುತಂತ್ರ ಮಾಡಿದವರು ಅವರು. ಕಾಂಗ್ರೆಸ್ ಸರ್ಕಾರ ದಲಿತರಿಗೆ ಅಭಿವೃದ್ಧಿಗೆ ಬೇಕಾದ ಹಣ ದುರ್ಬಳಕೆ ಮಾಡಿಕೊಂಡಿದೆ. ಭೂಮಿ ಇಲ್ಲದವರು ಉಳುಮೆ ಮಾಡಲು ಅರ್ಜಿ ಹಾಕಿದವರಿಗೆ ಭೂಮಿ ಕೊಡಲಿಲ್ಲ. ಬದಲಿಗೆ ಈ ಸರ್ಕಾರವೇ ಭೂ ಸ್ವಾಹ ಮಾಡಿದ್ದಾರೆ ಎಂದು ದೂರಿದರು.
ದಲಿತರು ಉದ್ಯಮಶೀಲತೆಗೆ ಕಾರುಗಳನ್ನು ತೆಗೆದುಕೊಳ್ಳಲು ಹಣದಲ್ಲಿ ಶಾಸಕರು ಕೋಟಿಗಟ್ಟಲೇ ಐಷಾರಾಮಿ ಕಾರು ಖರೀದಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಕುತಂತ್ರ ಮಾಡಿದರೆ ಸಿದ್ಧರಾಮಯ್ಯ ಸರ್ಕಾರ ಮೋಸ ವಂಚನೆಗೆ ಹೆಸರಾಗಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ ಲೂಟಿಯಲ್ಲಿ ತೊಡಗಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಜಾತಿ ಮತ್ತು ಕಷ್ಟ ಪಿಎಸ್‌ಐ ಪರಶುರಾಮ್ ಬಲಿ ಪಡೆದಿದೆ. ಯಾದಗಿರಿ ಶಾಸಕ ಮತ್ತು ಅವರ ಪುತ್ರನಿಗೆ ೨೦ ಲಕ್ಷ ರೂಪಾಯಿ ಕೊಟ್ಟಿದ್ದರು. ೭ ತಿಂಗಳಿಗೆ ಮತ್ತೆ ೩೦ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ೨೦ ಲಕ್ಷ ಕೊಟ್ಟ ದುಡ್ಡು ಕೇಳಲು ಹೋದಾಗ ಬೈದು ಜಾತಿ ನಿಂದನೆ ಮಾಡಲಾಗಿದೆ. ರಾಜ್ಯ ಸರ್ಕಾರ ಇದನ್ನು ಸಿಐಡಿ ತನಿಖೆಗೆ ನೀಡಿದ್ದು, ವರದಿಯಲ್ಲೇನಿದೆ ಗೊತ್ತಿಲ್ಲ. ಪರಶುರಾಮ್ ಕುಟುಂಬಕ್ಕೆ ಅನ್ಯಾಯ ಆಗಿದೆ. ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್, ಪೊಲೀಸ್ ಸಂಘದ ಅಧ್ಯಕ್ಷ ಶಶಿಧರ್, ಬಿಜೆಪಿ ನಗರ ಅಧ್ಯಕ್ಷ ನವೀನ್ ಚಾಲುಕ್ಯ, ಬಿಜೆಪಿ ಜಿಲ್ಲಾ ವಕ್ತಾರ ಚಲವಾದಿ ತಿಪ್ಪೇಸ್ವಾಮಿ, ಜಗದೀಶ್, ಚಲವಾದಿ ವೆಂಕಟೇಶ್‌ಸ್ವಾಮಿ ಇತರರು ಉಪಸಿತರಿದ್ದರು.
ಇದೇ ಸಂದರ್ಭ ಚಲವಾದಿ ನಾರಾಯಣಸ್ವಾಮಿ ಕ್ಯಾದಿಗೆರೆ ಸಮುದಾಯದ ನಾಯಕಗಳನ್ನು ಭೇಟಿ ಮಾಡಿ ಪಾದಯಾತ್ರೆ ಬಗ್ಗೆ ಚರ್ಚಿಸಿದರು.