Tuesday, March 28, 2023

Latest Posts

ಹಸಿವಿನಿಂದ ಬಳಲಿದವರನ್ನು ರಕ್ಷಣೆ ಮಾಡಿದ್ದು ಸಿದ್ದರಾಮಯ್ಯ ಸಕಾ೯ರ : ಶಾಸಕ ಜಮೀರ್ ಅಹ್ಮದ್

ಹೊಸದಿಗಂತ ವರದಿ ಕಲಬುರಗಿ :

ರಾಜ್ಯದಲ್ಲಿ 2013 ರಿಂದ 2018ರ ವರೆಗೂ ಹಸಿದವಿನಿಂದ ಬಳಲಿದವರನ್ನು ರಕ್ಷಣೆ ಮಾಡಿದ್ದು, ನಮ್ಮ ಸಿದ್ದರಾಮಯ್ಯ ಅವರ ಸಕಾ೯ರವೆಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಬಡವರಿಗೆ ನೀಡಿದ್ದು ಹೇಳಿಕೊಳ್ಳುವಂತಹ ಯೋಜನೆಗಳಾಗಿವೆ ಎಂದರು.

ಮುಸ್ಲಿಮರು ಎಲ್ಲಾ ರಂಗಗಳಲ್ಲಿ ಮುಂದೆ ಬರಬೇಕು. ಸಾರೇ ಜಹಾಂಸೆ ಅಚ್ಛಾ, ಹಿಂದೂಸ್ಥಾನ ಹಮಾರಾ ಎಂದು ಇಸ್ಲಾಂ ಧರ್ಮ ಹೇಳಿದ್ದು,ಎಲ್ಲಾ ಸಮುದಾಯದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ನಮ್ಮ ಕಾಂಗ್ರೆಸ್ ಸಕಾ೯ರವೆಂದು ಹೇಳಿದರು.

ಈ ಬಾರಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಕನಾ೯ಟಕದ ಜನರು ಈ ಬಾರಿ ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಲಿದ್ದಾರೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!