Saturday, April 1, 2023

Latest Posts

ಲಂಬಾಣಿ ಮಹಿಳೆಯರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ!

ಹೊಸದಿಗಂತ ವರದಿ ಕಲಬುರಗಿ: 

ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ ವೇಳೆ ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ನೃತ್ಯಕ್ಕೆ ತಾವು ಸಹ ಹೆಜ್ಜೆ ಹಾಕಿದರು.

ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಲು ಮೆರವಣಿಗೆ ಮೂಲಕ ವೇದಿಕೆ ಬಳಿ ಬಂದಾಗ ಲಂಬಾಣಿ ಮಹಿಳೆಯರ ಜೊತೆ ಸಿದ್ದರಾಮಯ್ಯ ಅವರು ನೃತ್ಯ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೃತ್ಯ ನೋಡಿ ಕಾಂಗ್ರೆಸ್ ನಾಯಕರು ಸಂತೋಷಪಟ್ಟರು.

ಇದಕ್ಕೂ ಮುನ್ನ ಬೆಳಿಗ್ಗೆ ನಗರದ ಪ್ರಸಿದ್ಧ ಖಾಜಾ ಬಂದೇ ನವಾಜ್ ದಗಾ೯ಕ್ಕೆ ತೆರಳಿ ಸಿದ್ದರಾಮಯ್ಯ ಅವರು ದಗಾ೯ದ ಗೋರಿಗೆ ಚಾದರ್ ಹೊದಿಸಿ ನಮಸ್ಕರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕಿ ಖನೀಜ್ ಫಾತೀಮಾ, ಶಾಸಕ ಜಮೀರ್ ಅಹ್ಮದ್,ರಹೀಂ ಖಾನ್ ಸೇರಿದಂತೆ ಇತರೆ ನಾಯಕರು ಸಾಥ್ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!