ಸಿದ್ದರಾಮಯ್ಯ ಕೃತಜ್ಞತಾ ಸಮಾವೇಶಕ್ಕೆ ತಯಾರಾಗಿದೆ ಭಕ್ಷ್ಯ ಭೋಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಎಂ ಆದ ಬಳಿಕ ಸಿದ್ದರಾಮಯ್ಯನವರು ಮೊದಲ ಬಾರಿಗೆ ತಮ್ಮ ತವರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಗೆಲ್ಲಿಸಿಕೊಟ್ಟ ಜನರಿಗಾಗಿ ಕೃತಜ್ಞತಾ ಸಮಾವೇಶವನ್ನು ಏರ್ಪಡಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಲಾಗಿದೆ.

ಮೈಸೂರಿನ ವರುಣಾದಲ್ಲಿಂದು ಕೃತಜ್ಞತಾ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಹಾಜರಾಗಲಿರುವವರಿಗೆ ಬಗೆ ಬಗೆ ಖಾದ್ಯಗಳು ತಯಾರಾಗಿವೆ.

ಕಾರ್ಯಕ್ರಮದ ಮೆನು ಹೀಗಿದೆ

ಹೋಳಿಗೆ, ಪೂರಿ, ಕೋಸಂಬರಿ, ಹುರುಳಿಕಾಯಿ ಪಲ್ಯ, ಬಜ್ಜಿ, ಬೋಂಡ, ಮೊಸರು ಬಜ್ಜಿ, ಹಪ್ಪಳ-ಸಂಡಿಗೆ, ಪುಲಾವ್, ಅನ್ನ-ಸಾಂಬರು ಮತ್ತು ರಸಂ, ಮೊಸರು ಮತ್ತು ಮಜ್ಜಿಗೆ. ಊಟದ ನಂತರ ತಿನ್ನಲು ಏಲಕ್ಕಿ ಬಾಳೆಹಣ್ಣು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!