ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಖ್ಯಮಂತ್ರಿ ಪಟ್ಟ ಅಲಂಕರಿಸೋದಕ್ಕೆ ಸಿದ್ದರಾಮಯ್ಯ ರೆಡಿಯಾಗಿದ್ದಾರೆ, ಇನ್ನೇನು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ದೆಹಲಿಯ ರಾಹುಲ್ ಗಾಂಧಿ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ರಾಗಾ ಮನೆಯಿಂದ ಖರ್ಗೆ ನಿವಾಸಕ್ಕೆ ಸಿದ್ದರಾಮಯ್ಯ ತೆರಳಲಿದ್ದು, ಅಲ್ಲಿ ಸಿಎಂ ಅಭ್ಯರ್ಥಿ ಘೋಷಣೆಯಾಗಲಿದೆ. ಭಾರೀ ಪೈಪೋಟಿ ಇದ್ದರೂ ಸಿಎಂ ಸ್ಥಾನ ತನ್ನದೇ ಎನ್ನುವಂತೆ ಸುಮ್ಮನಿದ್ದ ಸಿದ್ದರಾಮಯ್ಯ ಎರಡು ದಿನದಿಂದ ಮಾಧ್ಯಮಗಳ ಮುಂದೆ ಮೌನ ಕಾಪಾಡಿಕೊಂಡಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯರೇ ಕಾರಣ ಎಂದು ಡಾ. ಕೆ. ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದರೂ ಸಿದ್ದರಾಮಯ್ಯ ಪ್ರಶ್ನೆ ತನಗಲ್ಲ ಎನ್ನುವ ರೀತಿ ರಿಯಾಕ್ಷನ್ ನೀಡಿದ್ದಾರೆ. ಸಿಎಂ ಸ್ಥಾನದ ಬಗ್ಗೆಯೂ ಮೌನ ತಾಳಿದ್ದು, ಹೇಳಿ ತೋರಿಸೋದಿಲ್ಲ, ಮಾಡಿ ತೋರಿಸ್ತೇನೆ ಎನ್ನುವ ಲೆಕ್ಕಾಚಾರ ಸಿದ್ದರಾಮಯ್ಯರದ್ದಿರಬಹುದು!