June 1, 2026
Monday, June 1, 2026
spot_img

ಸಿಲಿಕಾನ್ ಸಿಟಿಯ ಸೈಲೆಂಟ್ ಕ್ರೈಸಿಸ್: ಆತ್ಮಹ*ತ್ಯೆ ದರದಲ್ಲಿ ಬೆಂಗಳೂರು ಟಾಪ್ ನಲ್ಲಿದ್ಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರು ಇದೀಗ ಮತ್ತೊಂದು ಗಂಭೀರ ಕಾರಣಕ್ಕೆ ಸುದ್ದಿಯಲ್ಲಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ 2024ರ ಅಂಕಿ ಅಂಶಗಳ ಪ್ರಕಾರ, ಆತ್ಮಹತ್ಯೆ ದರದ ವಿಷಯದಲ್ಲಿ ಬೆಂಗಳೂರು ಮಹಾನಗರಗಳ ಪೈಕಿ ಅಗ್ರಸ್ಥಾನದಲ್ಲಿದೆ. ಒಟ್ಟು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದಾಗ ಬೆಂಗಳೂರಿನ ಪರಿಸ್ಥಿತಿ ಹೆಚ್ಚು ಕಳವಳಕಾರಿ ಎಂದು ವರದಿ ಸೂಚಿಸಿದೆ.

ಅಂಕಿ ಅಂಶಗಳು ಹೇಳುತ್ತಿರುವ ಕಹಿ ಸತ್ಯ

ಸುಮಾರು 85 ಲಕ್ಷ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಕಳೆದ ವರ್ಷ 2,403 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ನಗರದ ಆತ್ಮಹತ್ಯೆ ದರ 28.3ಕ್ಕೆ ತಲುಪಿದೆ. ಜನಸಂಖ್ಯೆ ಹೆಚ್ಚು ಇರುವ ದೆಹಲಿಯಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಿದ್ದರೂ, ಅನುಪಾತದ ದೃಷ್ಟಿಯಿಂದ ಬೆಂಗಳೂರು ಮುಂಚೂಣಿಯಲ್ಲಿದೆ.

ಆರ್ಥಿಕ ಸಮಸ್ಯೆಗಳು, ಉದ್ಯೋಗದ ಅನಿಶ್ಚಿತತೆ, ಜೀವನ ವೆಚ್ಚದ ಏರಿಕೆ, ಕುಟುಂಬ ಮತ್ತು ಸಂಬಂಧಗಳಲ್ಲಿನ ಬಿರುಕು, ಸಾಮಾಜಿಕ ಒಂಟಿತನ ಸೇರಿದಂತೆ ಹಲವು ಕಾರಣಗಳು ವ್ಯಕ್ತಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಹಾಯ ಪಡೆಯಲು ತಡವಾಗುತ್ತಿರುವುದು ಸಮಸ್ಯೆ

ಹಲವರು ಆರಂಭದಲ್ಲಿ ತಮ್ಮ ಸಮಸ್ಯೆಗಳನ್ನು ತಾವೇ ನಿಭಾಯಿಸಲು ಪ್ರಯತ್ನಿಸುತ್ತಾರೆ. ಆದರೆ ಒತ್ತಡ ದೀರ್ಘಕಾಲ ಮುಂದುವರಿದಾಗ ಖಿನ್ನತೆ, ಆತಂಕ ಹಾಗೂ ಅಸಹಾಯಕತೆಯ ಭಾವನೆಗಳು ಹೆಚ್ಚಾಗಿ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

ಇದನ್ನೂ ಓದಿ:

ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಿರಂತರ ಸ್ಪರ್ಧೆ ಮತ್ತು ಕೆಲಸದ ಒತ್ತಡವು ಅನೇಕ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಕೇವಲ ನಗರ ವಿಸ್ತರಣೆ ಅಥವಾ ಕೈಗಾರಿಕೆಗಳ ಸ್ಥಳಾಂತರದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾನಸಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವ ಅಗತ್ಯ

ಆರ್ಥಿಕ ಅಭಿವೃದ್ಧಿಯ ಜೊತೆಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವುದು ಅಗತ್ಯವಾಗಿದೆ. ಸಮಯಕ್ಕೆ ಸರಿಯಾಗಿ ಸಮಾಲೋಚನೆ ಮತ್ತು ಬೆಂಬಲ ದೊರೆತರೆ ಇಂತಹ ದುರ್ಘಟನೆಗಳನ್ನು ತಡೆಯಲು ಸಾಧ್ಯ ಎಂದು ತಜ್ಞರು ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !