Friday, December 8, 2023

Latest Posts

ಭಾರತಕ್ಕೆ ಲಾಂಗ್ ಜಂಪ್‌, 4×400 ಮೀ ರಿಲೇಯಲ್ಲಿ ಬೆಳ್ಳಿಯ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯಾನ್ ಗೇಮ್ಸ್ ​ನಲ್ಲಿ ಭಾರತದ 4×400 ಮೀ ಮಿಶ್ರ ತಂಡ ಬೆಳ್ಳಿ ಗೆದ್ದುಕೊಂಡಿತು. ಅದೇ ರೀತಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಆನ್ಸಿ ಸೋಜನ್ ಎಡಪ್ಪಿಳ್ಳಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ.

ಮಹಮ್ಮದ್ ಅಜ್ಮಲ್ ವರಿಯತ್ತೋಡಿ, ವಿತ್ಯಾ ರಾಮರಾಜ್, ರಾಜೇಶ್ ರಮೇಶ್ ಮತ್ತು ಶುಭಾ ವೆಂಕಟೇಶನ್ 4×400 ಮೀಟರ್​ ದೂರವನ್ನು ಮಿಶ್ರ ತಂಡ ರಿಲೇಯಲ್ಲಿ 3:14.34 ಸೆ. ಸಮಯದಲ್ಲಿ ಕ್ರಮಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಬೆಳ್ಳಿ ಪದಕ ಭಾರತದ ಪಾಲಾಯಿತು.

ಆನ್ಸಿ ಸೋಜನ್ ಎಡಪ್ಪಿಳ್ಳಿ ತಮ್ಮ ಚೊಚ್ಚಲ ಏಷ್ಯನ್ ಗೇಮ್ಸ್‌ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. ಐದನೇ ಪ್ರಯತ್ನದಲ್ಲಿ 6.63 ಮೀ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!