ಪುರುಷರಿಗಾಗಿ ಸಿಂಪಲ್ ಬ್ಯೂಟಿ ಟಿಪ್ಸ್, ತ್ವಚೆ ಆರೋಗ್ಯವಾಗಿಟ್ಟುಕೊಳ್ಳೋದು ಹೀಗೆ..

ತ್ವಚೆ ಆರೋಗ್ಯವಾಗಿ ಇಟ್ಟುಕೊಳ್ಳುವುದು ಹಾಗೂ ಸ್ಕಿನ್ ಕೇರ್ ಮಾಡುವುದು ಬರೀ ಮಹಿಳೆಯರ ಕೆಲಸ ಅಲ್ಲ, ಪುರುಷರೂ ಅವರ ಚರ್ಮದ ಕಾಳಜಿ ವಹಿಸಬೇಕಿದೆ. ಪುರುಷರಿಗಾಗಿ ಸಿಂಪಲ್ ಬ್ಯೂಟಿ ಟಿಪ್ಸ್ ಇಲ್ಲಿದೆ..

  • ಮನೆಯಿಂದ ಹೊರಹೋಗುವ ಮುನ್ನ ಕೈ ಹಾಗೂ ಮುಖಕ್ಕೆ ಸನ್‌ಸ್ಕ್ರೀನ್ ಬಳಕೆ ಮಾಡಿ, ಮುಖದ ಚರ್ಮ ನೀವು ಅಂದುಕೊಂಡಿದ್ದಕ್ಕಿಂತ ಕೋಮಲವಾಗಿರುತ್ತದೆ. ಅದಕ್ಕೆ ಸನ್‌ಸ್ಕ್ರೀನ್ ಅವಶ್ಯಕತೆ ಇದೆ.
  • ಮುಖ ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ಮನೆಯಲ್ಲಿರುವಾಗ ಅಥವಾಹೊರಹೋಗುವಾಗ ಮುಖ ತೊಳೆದ 1 ನಿಮಿಷದೊಳಗೆ ಮಾಯಿಶ್ಚರೈಸರ್ ಹಚ್ಚಿ.
  • ಶೇವಿಂಗ್ ಕ್ರೀಂಗಳನ್ನು ಬಳಸಿಯೇ ಶೇವ್ ಮಾಡಿ. ಕ್ರೀಂ ಇಲ್ಲದೆ ಶೇವ್ ಮಾಡಿದರೆ ಸ್ಕಿನ್ ಡ್ರೈ ಆಗಬಹುದು.
  • ದಿನಕ್ಕೆರೆಡು ಬಾರಿ ಮುಖ ತೊಳಿಯಿರಿ. ವಾತಾವರಣದಿಂದ ಚರ್ಮದ ಒಳಗೆ ಧೂಳು ತಾಗಿರುತ್ತದೆ. ಇದನ್ನು ತೆಗೆಯುವುದು ಉತ್ತಮ.
  • ಹೆಣ್ಣುಮಕ್ಕಳ ಕ್ರೀಂ, ಶಾಂಪೂ ಬಳಸಬೇಡಿ. ಇಬ್ಬರ ಸ್ಕಿನ್ ಹಾಗೂ ಸ್ಕಾಲ್ಪ್ ಬೇರೆ ಬೇರೆ, ಹಾಗಾಗಿ ಬೇರೆ ಶಾಂಪೂ ಬಳಸಿ.
  • ಗಂಡಸರೂ ಕಂಡಿಶನರ್ ಬಳಸಬಹುದು. ಉದ್ದ ಕೂದಲಿನ ಹೆಣ್ಣುಮಕ್ಕಳಿಗೆ ಮಾತ್ರ ಕಂಡೀಷನರ್ ಎಂದು ಅಂದುಕೊಳ್ಳಬೇಡಿ. ನೀವು ಬಳಸಬಹುದು.
  • ವಯಸ್ಸಾದ ನಂತರ ರಿಂಕಲ್ಸ್ ದೂರ ಇಡಲು ಸೆರಮ್ ಬಳಕೆ ಮಾಡಿ. ಸೆರಮ್ ಚರ್ಮದ ಒಳಹೋಗಿ ರಂಧ್ರಗಳನ್ನು ಮುಚ್ಚುತ್ತದೆ.
  • ತುಟಿಗಳಿಗೆ ಆಗಾಗ ಲಿಪ್‌ಬಾಮ್ ಬಳಸಿ. ಲಿಪ್ ಬಾಮ್ ಬರೀ ಹುಡುಗಿಯರಿಗೆ ಎಂದು ಸುಮ್ಮನಾಗಬೇಡಿ. ಲಿಪ್‌ಬಾಮ್ ಹಾಕುವುದು ತುಂಬಾನೇ ಅವಶ್ಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!