August 10, 2026
Monday, August 10, 2026
spot_img

ಏಕ ಬಳಕೆ ಪ್ಲಾಸ್ಟಿಕ್: ಸುಳ್ಯದಲ್ಲಿ ಹೊಟೇಲ್, ಅಂಗಡಿಮುಂಗಟ್ಟುಗಳಿಗೆ ಅಧಿಕಾರಿಗಳ ದಿಢೀರ್ ದಾಳಿ

ಹೊಸದಿಗಂತ ವರದಿ ಸುಳ್ಯ:

ಏಕ ಬಳಕೆಯ ಪ್ಲಾಸ್ಟಿಕ್‌ ಉಪಯೋಗಿಸುತ್ತಿರುವ ಹಿನ್ನೆಲೆಯಲ್ಲಿ ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಳಿಗೆಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಲಾಗಿದೆ.

ಕುರುಂಜಿ ಭಾಗ್, ದೇವಸ್ಥಾನ ವಠಾರ, ಮುಖ್ಯ ರಸ್ತೆ ವಠಾರದ ವಿವಿಧ ಹೋಟೆಲ್,ಅಂಗಡಿ ಇತ್ಯಾದಿ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ದಾಳಿ ನಡೆಸಿ, ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದೆ.

ಸುಮಾರು 15 ಕೆ ಜಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು ಸೀಝ್ ಮಾಡಿ ಕಚೇರಿಗೆ ತರಲಾಯಿತು. ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್‌ನ್ನು ಯಾವುದೇ ವ್ಯಾಪಾರಿ ಮಳಿಗೆಯವರು ಬಳಸಬಾರದು ಎಂದು ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ಸೂಚನೆ ನೀಡಿದ್ದಾರೆ.

ಮುಂದಿನ ಹಂತದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಸಾಮಾಗ್ರಿಗಳನ್ನು ಸೀಝ್ ಮಾಡುವುದರ ಜೊತೆಗೆ ದಂಡ ವಿಧಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ. ದಾಳಿ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಕೆ, ಕರ ವಸೂಲಿಗಾರ ಮಜೀದ್, ಸ್ವಚ್ಛತಾ ಮೇಲ್ವಿಚಾರಕರಾದ ತಿಮ್ಮಪ್ಪ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !