ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಗಳದಲ್ಲಿದ್ದ 10 ತಿಂಗಳ ಮಗುವನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ ಘಟನೆ ಗುಜರಾತ್‍ನ ಭರೂಚ್‍ನ ಪನೋಳಿ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ದೀಪಕ್ ಕುಮಾರ್ ಲಾಲ್ಬಾಬು ಸಿಂಗ್ (30) ಎಂದು ಗುರುತಿಸಲಾಗಿದೆ.
ಆರೋಪಿ ಮಗುವನ್ನು ತನ್ನ ಮನೆಗೆ ಕರೆದೊಯ್ಯುವಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಓಜಾ ತಿಳಿಸಿದ್ದಾರೆ.
ಆರೋಪಿ ಮಗುವಿನ ಕುಟುಂಬದ ಪರಿಚಯಸ್ಥನಾಗಿದ್ದು, ಮಗುವಿನೊಂದಿಗೆ ಸಲುಗೆಯಿಂದ ಇದ್ದ. ಭಾನುವಾರ ಮಗು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ, ಆರೋಪಿ ಅವಳನ್ನು ಕರೆದೊಯ್ದು ಮನೆಯಿಂದ ಅನತಿ ದೂರದಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಗು ಅಳುವುದನ್ನು ಕೇಳಿದ ಅಜ್ಜಿ, ಮಗುವಿನ ಬಳಿ ಬಂದಾಗ ಮಗುವಿಗೆ ರಕ್ತಸ್ರಾವವಾಗಿದ್ದು, ತೀವ್ರವಾಗಿ ಗಾಯಗೊಂಡಿರುವುದನ್ನು ಗಮನಿಸಿದ್ದಾರೆ. ಬಳಿಕ ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.