May 29, 2026
Friday, May 29, 2026
spot_img

VIARL | ಒಂದೇ ಸ್ಕೂಟಿಯಲ್ಲಿ ಆರು ಅಪ್ರಾಪ್ತ ವಯಸ್ಕ ಮಕ್ಕಳ ಪ್ರಯಾಣ, ಇವರ ಪೋಷಕರು ಏನ್‌ ಮಾಡ್ತಿದ್ದಾರೆ?

ಅಪ್ರಾಪ್ತ ವಯಸ್ಕ ಮಕ್ಕಳನ್ನು ಹೆಲ್ಮೆಟ್‌ ಇಲ್ಲದೆ ಸ್ಕೂಟಿಯ ಹಿಂಬದಿಯಲ್ಲಿ ಕೂರಿಸಿಕೊಳ್ಳೋಕೆ ಭಯ ಪಡುವ ಪೋಷಕರಿದ್ದಾರೆ. ಆದರೆ ಬೆಂಗಳೂರಿನಲ್ಲಿ ಆರು ಅಪ್ರಾಪ್ತ ವಯಸ್ಕ ಮಕ್ಕಳು ರಸ್ತೆಯಲ್ಲಿ ಸ್ಕೂಟಿ ಓಡಿಸಿಕೊಂಡು ಹೋಗಿದ್ದಾರೆ.

ಈ ವಿಡಿಯೋ ವೈರಲ್‌ ಆಗಿದ್ದು, ಇವರ ಪೋಷಕರು ಏನ್‌ ಮಾಡ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಪಾದರಾಯನಪುರ ಮುಖ್ಯರಸ್ತೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಆರು ಮಕ್ಕಳು ಸ್ಕೂಟಿಯಲ್ಲಿ ಕುಳಿತಿದ್ದು, ಅಪ್ರಾಪ್ತ ವಯಸ್ಕ ಬಾಲಕನೇ ಗಾಡಿ ಓಡಿಸಿದ್ದಾರೆ. ಈ ಮಕ್ಕಳು ಹೆಚ್ಚೆಂದರೆ ಐದು ಅಥವಾ ಆರನೇ ಕ್ಲಾಸ್‌ ಇರಬಹುದು ಎನ್ನಲಾಗಿದೆ.

ಮನೆಯಲ್ಲಿರುವ ಪೋಷಕರಿಗೆ ಮಕ್ಕಳು ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಗೊತ್ತಿರೋದಿಲ್ವಾ? ಸ್ಕೂಟಿ ಮಕ್ಕಳು ಓಡಿಸೋದು ಅಂದ್ರೆ ತಮಾಷೆನಾ ಅದರಲ್ಲಿಯೂ ಸಣ್ಣ ಹುಡುಗ ಐದು ಜನರನ್ನು ಬ್ಯಾಲೆನ್ಸ್‌ ಮಾಡಿ ಗಾಡಿ ಓಡಿಸಿದ್ದಾನೆ. ಇದನ್ನು ನೋಡಿದ್ರೆ ಎಂತವರಿಗೂ ಭಯ ಆಗುವಂತೆ ಕಾಣಿಸುತ್ತದೆ.

ಗೌರಿಪಾಳ್ಯ ಮುಖ್ಯ ರಸ್ತೆಯಲ್ಲಿ ಮಕ್ಕಳು ಓಡಾಡಿದ್ದು, ಜನ ಗಾಡಿ ನಂಬರ್‌ ಸಮೇತ ಫೋಟೊ ತೆಗೆದಿದ್ದಾರೆ. ಸದ್ಯದ್ರಲ್ಲೇ ಪೊಲೀಸರು ಅವರ ಪೋಷಕರ ಮನೆ ಬಾಗಿಲು ತಟ್ಟೋದು ಗ್ಯಾರಂಟಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !