July 29, 2026
Wednesday, July 29, 2026
spot_img

Viral | ನಿಂಗಿದು ಬೇಕಿತ್ತಾ ಮಗನೇ….! ಬಿಸಿಲಿನಿಂದ ತಪ್ಪಿಸಿಕೊಳ್ಳೋಕೆ ಮಾಡಿದ ಉಪಾಯ ಹೀಗಾ ಉಲ್ಟಾ ಹೊಡಿಯೋದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆಯ ತಾಪದಿಂದ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ಮಾಡಿದ ವಿಚಿತ್ರ ಪ್ರಯತ್ನ ಕೊನೆಗೆ ಆತಂಕಕಾರಿ ಪರಿಸ್ಥಿತಿಗೆ ಕಾರಣವಾದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ತಲೆಗೆ ಬಿಸಿ ತಾಗದಂತೆ ಸ್ಟೀಲ್ ಹಾಲಿನ ಕ್ಯಾನ್ ಅನ್ನು ತಲೆಯ ಮೇಲೆ ಹಾಕಿಕೊಂಡ ವ್ಯಕ್ತಿ, ಬಳಿಕ ಅದನ್ನೇ ತೆಗೆಯಲಾಗದೆ ಎರಡು ಗಂಟೆಗಳ ಕಾಲ ಪರದಾಡಿದ ಘಟನೆ ನಡೆದಿದೆ.

ಮಾಧೋಗಢ ಗ್ರಾಮದ ನಿವಾಸಿ ಕಲೂರಾಮ್ ರೆಬಾರಿ ಅವರು ತೀವ್ರ ಬಿಸಿಲಿನ ನಡುವೆ ಹೊರಗಡೆ ತೆರಳಿದ್ದ ವೇಳೆ, ತಾತ್ಕಾಲಿಕ ರಕ್ಷಣೆಯಾಗಿ ಹತ್ತಿರದಲ್ಲಿದ್ದ 15 ಲೀಟರ್ ಸಾಮರ್ಥ್ಯದ ಸ್ಟೀಲ್ ಹಾಲಿನ ಕ್ಯಾನ್ ಅನ್ನು ತಲೆಯ ಮೇಲೆ ಹಾಕಿಕೊಂಡಿದ್ದಾರೆ. ಆದರೆ, ಕ್ಯಾನ್ ಒಳಗೆ ತಲೆ ಸಿಲುಕಿಕೊಂಡಿದ್ದು, ಎಷ್ಟೇ ಪ್ರಯತ್ನಿಸಿದರೂ ಹೊರಗೆ ಬರಲಿಲ್ಲ.

ವಿಷಯ ತಿಳಿದ ಗ್ರಾಮಸ್ಥರು ಕೂಡಲೇ ನೆರವಿಗೆ ಧಾವಿಸಿ, ಎಣ್ಣೆ ಹಚ್ಚುವುದು, ಸೋಪು ಬಳಸಿ ಎಳೆಯುವುದು ಸೇರಿದಂತೆ ಹಲವು ವಿಧಾನಗಳನ್ನು ಪ್ರಯೋಗಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಪರಿಸ್ಥಿತಿಯ ಗಂಭೀರತೆ ಅರಿತು ವಿದ್ಯುತ್ ಗ್ರೈಂಡರ್ ಸಹಾಯದಿಂದ ಕ್ಯಾನ್ ಕತ್ತರಿಸುವ ಕಾರ್ಯಕ್ಕೆ ಮುಂದಾದರು.

ಅತ್ಯಂತ ಎಚ್ಚರಿಕೆಯಿಂದ ನಡೆದ ಕಾರ್ಯಾಚರಣೆಯ ಬಳಿಕ ಕ್ಯಾನ್ ಅನ್ನು ಸುರಕ್ಷಿತವಾಗಿ ತೆಗೆದು ವ್ಯಕ್ತಿಯನ್ನು ರಕ್ಷಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !