October 18, 2026
Sunday, October 18, 2026
spot_img

6 ಜನರ ಬರ್ಬರ ಹತ್ಯೆ ಪ್ರಕರಣ: ಮತ್ತೆ ಆರು ಜನ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಹೊಸದಿಗಂತ ವರದಿ ವಿಜಯಪುರ:

ತೀವ್ರ ಆತಂಕ ಮೂಡಿಸಿದ ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ 6 ಜನರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ 6 ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇಲ್ಲಿನ ಅಪ್ಪುಗೌಡ ಲಗಮನಗೌಡ ಉರ್ಫ್ ಲಕ್ಕನಗೌಡ ಪಾಟೀಲ (49), ಶಂಕ್ರೆಪ್ಪ ಮಾದೇವ ಅರಕೇರಿ (33), ಅಪ್ಪಾಸಾಬ ಉರ್ಫ್ ಕಿಶನ್‌ ಶಂಕರ ಭೋವಿ (56), ಸತ್ಯೆಪ್ಪ ಜಕ್ಕಪ್ಪ ಬಿರಾದಾರ (46), ಸುಲ್ತಾನ ಮಾದೇವ ಬಿರಾದಾರ (24), ಮಹೇಶ ಬೆಳ್ಳೆಣ್ಣಿ ಬಿರಾದಾರ (25) ಬಂಧಿತ ಆರೋಪಿಗಳಾಗಿದ್ದು, ಈಗಾಗಲೇ ಕಳೆದ ಜೂ.1, 2026 ರಂದು 12 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೀಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 18 ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Must Read