Saturday, February 4, 2023

Latest Posts

ರಾಷ್ಟ್ರ ಮಟ್ಟದ ಕ್ರೀಡೆಗೆ ಕೂಡಿಗೆ ಪದವಿಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳು ಆಯ್ಕೆ

ಹೊಸದಿಗಂತ ವರದಿ,ಕುಶಾಲನಗರ:

ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮೇಲಾಟಗಳ ಕ್ರೀಡಾಕೂಟದಲ್ಲಿ ಕೂಡಿಗೆ ಪದವಿಪೂರ್ವ ಕಾಲೇಜಿನ 6 ವಿದ್ಯಾರ್ಥಿಗಳು ರರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರೆ.
ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮೇಲಾಟಗಳ ಕ್ರೀಡೆಯಲ್ಲಿ 1,500 ಮೀಟರ್ ಮತ್ತು 4×400 ಮೀಟರ್ ಓಟದಲ್ಲಿ ಹೆಚ್.ವಿ. ಚೇತನ್ ಪ್ರಥಮ, 400, ಮತ್ತು 200 ಮೀಟರ್ ನಲ್ಲಿ ಎಂ.ಸಿ. ಮಾನಸ ಪ್ರಥಮ ಮತ್ತು ದ್ವಿತೀಯ, ಕೆ.ಎನ್. ‌ಭೂಮಿಗಾ ಟ್ರಿಪಲ್ ಜಂಪ್ ಪ್ರಥಮ, ಜಿ.ಎಸ್. ಸಹನಾ ಅನುಷ್ಠಾನ ಜೊಂಡು ಹರ್ಡಲ್ಸ್’ನಲ್ಲಿ ದ್ವಿತೀಯ, ಶ್ರೀರಕ್ಷಾ 1,500 ಮೀಟರ್ ನಲ್ಲಿ ದ್ವಿತೀಯ, ಬಿ .ಬಿ. ಸಚಿನ್ 4×400 ಮೀಟರ್ ನಲ್ಲಿ ಪ್ರಥಮ, ಭೀಮಾಶಂಕರ 500 ಮೀಟರ್ ನಲ್ಲಿ ತೃತೀಯ ಸ್ಧಾನ ಪಡೆದಿದ್ದಾರೆ.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಆರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಮೇಲಾಟಗಳ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಪ್ರಾಂಶುಪಾಲ ಡಾ. ಬಸಪ್ಪ, ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ. ವಿಧ್ಯಾರ್ಥಿಗಳಿಗೆ ಕೂಡಿಗೆ ಕ್ರೀಡಾ ಶಾಲೆಯ ಅಥ್ಲೆಟಿಕ್ಸ್ ತರಬೇತುದಾರ ಲೋಕೇಶ್ ತರಬೇತಿ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!