ರಕ್ತಚಂದನ ಕಳ್ಳಸಾಗಣೆ: 73 ಸ್ಮಗ್ಲರ್ಸ್ ಅರೆಸ್ಟ್‌, ಬೋರೋಬ್ಬರಿ 50 ಕೋಟಿ ಮೌಲ್ಯದ ಸ್ವತ್ತು ವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಆಂಧ್ರಪ್ರದೇಶದ ರೆಡ್ ಸ್ಯಾಂಡರ್ಸ್ ಆ್ಯಂಟಿ ಸ್ಮಗ್ಲಿಂಗ್ ಟಾಸ್ಕ್ ಫೋರ್ಸ್ (ಆರ್‌ಎಸ್‌ಎಎಸ್‌ಟಿಎಫ್) ಶೇಷಾಚಲಂ ಅರಣ್ಯದಲ್ಲಿ ಈ ವರ್ಷ 50 ಕೋಟಿಗೂ ಹೆಚ್ಚು ಮೌಲ್ಯದ 50 ಮೆಟ್ರಿಕ್ ಟನ್ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದೆ ಮತ್ತು ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ 73 ಕುಖ್ಯಾತ ರಕ್ತಚಂದನ ಕಳ್ಳಸಾಗಣೆದಾರರನ್ನು ಬಂಧಿಸಿದೆ.
ಆ್ಯಂಟಿ ಸ್ಮಗ್ಲಿಂಗ್ ಟಾಸ್ಕ್ ಫೋರ್ಸ್ 1,396 ಕಾರ್ಯಾಚರಣೆಗಳನ್ನು ನಡೆಸಿದ್ದು, ಪ್ರಮುಖ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಕೂಂಬಿಂಗ್ ತಂಡಗಳನ್ನು ಬಲಪಡಿಸಲಾಗಿದೆ.
2021 ರಲ್ಲಿ, RSASTF ಪೊಲೀಸ್ ಠಾಣೆಗಳಲ್ಲಿ 180 ಪ್ರಕರಣಗಳನ್ನು ದಾಖಲಿಸಲಾಗಿದೆ. 2022 ರಲ್ಲಿ 106 ಪ್ರಕರಣ ದಾಖಲಾಗಿದೆ. ಕನಿಷ್ಠ 281 ಮರಕಡಿಯುವವರು, ಮೇಸ್ತ್ರಿಗಳು ಮತ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಅವರಲ್ಲಿ 70 ತಮಿಳುನಾಡಿಗೆ ಸೇರಿದವರು, 197 ಆಂಧ್ರಪ್ರದೇಶದವರು ಮತ್ತು ಐದು ಕರ್ನಾಟಕದವರಾಗಿದ್ದಾರೆ. ಇವರಿಂದ 50 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!