July 22, 2026
Wednesday, July 22, 2026
spot_img

SNACKS| ತರಕಾರಿ ತಿನ್ನದ ಮಕ್ಕಳಿಗೆ ಈ ರೀತಿ ರವೆ ಟೋಸ್ಟ್ ಮಾಡಿಕೊಡಿ, ಹೇಳ್ದೆ ಕೇಳ್ದೆ ಪ್ಲೇಟ್ ಖಾಲಿ ಮಾಡ್ತಾರೆ!

ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಹಸಿವು ಎಂದು ಕೇಳುವುದು ಸಾಮಾನ್ಯ. ಆದರೆ ಅವರಿಗೆ ತರಕಾರಿಗಳನ್ನು ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲು. ಈ ಸವಾಲಿಗೆ ಸೂಪರ್ ಪರಿಹಾರವೇ ರವೆ ವೆಜಿಟೇಬಲ್ ಟೋಸ್ಟ್. ಕ್ಯಾರೆಟ್, ಟೊಮೆಟೊ, ಈರುಳ್ಳಿಯಂತಹ ತರಕಾರಿಗಳೊಂದಿಗೆ ರವೆ ಮತ್ತು ಮೊಸರನ್ನು ಬಳಸಿ ಮಾಡುವ ಈ ತಿಂಡಿ ರುಚಿಯ ಜೊತೆಗೆ ಆರೋಗ್ಯವನ್ನೂ ನೀಡುತ್ತದೆ.   

ಬೇಕಾಗುವ ಸಾಮಗ್ರಿಗಳು :

ಬ್ರೆಡ್ ಸ್ಲೈಸ್‌ಗಳು

 ಉಪ್ಪಿಟ್ಟು ರವೆ / ಸಣ್ಣ ರವೆ

ಗಟ್ಟಿ ಮೊಸರು

ಈರುಳ್ಳಿ

ಟೊಮೆಟೊ

ಕ್ಯಾರೆಟ್ ತುರಿ

ಹಸಿರು ಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಕಾಳುಮೆಣಸಿನ ಪುಡಿ

ಉಪ್ಪು: ರುಚಿಗೆ ತಕ್ಕಷ್ಟು

ನೀರು

ಬೆಣ್ಣೆ ಅಥವಾ ಎಣ್ಣೆ

ಇದನ್ನೂ ಓದಿ:

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ರವೆ, ಮೊಸರು, ಹೆಚ್ಚಿದ ಈರುಳ್ಳಿ, ಟೊಮೆಟೊ, ಕ್ಯಾರೆಟ್ ತುರಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2 ರಿಂದ 3 ಚಮಚ ನೀರು ಸೇರಿಸಿ, ಬ್ರೆಡ್ ಮೇಲೆ ಹರಡುವ ಹದಕ್ಕೆ ಕಲಸಿಕೊಳ್ಳಬೇಕು. ರವೆ ನೀರನ್ನು ಹೀರಿಕೊಳ್ಳಲು ಇದನ್ನು 10 ನಿಮಿಷಗಳ ಕಾಲ ಮುಚ್ಚಿ ಇಡಬೇಕು. 10 ನಿಮಿಷಗಳ ನಂತರ ಮಿಶ್ರಣವನ್ನು ಮತ್ತೊಮ್ಮೆ ಕೈಯಾಡಿಸಿ. ಈಗ ಒಂದು ಬ್ರೆಡ್ ಸ್ಲೈಸ್ ತೆಗೆದುಕೊಂಡು, ಅದರ ಒಂದು ಬದಿಗೆ ಸಿದ್ಧಪಡಿಸಿದ ರವೆ ಮಿಶ್ರಣವನ್ನು ಚಮಚದಿಂದ ಸಮನಾಗಿ ಸವರಿ. ಗ್ಯಾಸ್ ಮೇಲೆ ತವಾವನ್ನು ಬಿಸಿ ಮಾಡಲು ಇಟ್ಟು, ಸ್ವಲ್ಪ ಬೆಣ್ಣೆ ಅಥವಾ ಎಣ್ಣೆಯನ್ನು ಸವರಿ ತವಾ ಬಿಸಿಯಾದ ತಕ್ಷಣ, ಬ್ರೆಡ್‌ನ ರವೆ ಮಿಶ್ರಣ ಹಚ್ಚಿದ ಭಾಗವನ್ನು ತವಾ ಕಡೆಗೆ ಮುಖ ಮಾಡಿ ಇಡಬೇಕು. ಉರಿಯನ್ನು ಮಧ್ಯಮ ಹದದಲ್ಲಿಡಿ.ಬ್ರೆಡ್‌ನ ಮೇಲ್ಭಾಗಕ್ಕೆ ಸ್ವಲ್ಪ ಬೆಣ್ಣೆ ಹಚ್ಚಿ. ರವೆ ಭಾಗ ಚೆನ್ನಾಗಿ ಬೆಂದು, ತಿಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಬ್ರೆಡ್ ಅನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಗರಿಗರಿಯಾಗುವವರೆಗೆ ಬೇಯಿಸಿದರೆ ಬಿಸಿಬಿಸಿಯಾದ ಮತ್ತು ಕ್ರಿಸ್ಪಿಯಾದ ರವೆ ಟೋಸ್ಟ್ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !